Recent Posts

Sunday, January 19, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ಕನ್ನಡ, ತಮಿಳು, ಮಲಯಾಳಂ, ಕೊಂಕಣಿ, ತುಳು ಸೇರಿದಂತೆ ಬಹುಭಾಷೆಗಳಲ್ಲಿ ನಟಿಯಾಗಿ ಮಿಂಚುತ್ತಿರುವ ಕುಡ್ಲದ ಕುವರಿ ಆದ್ಯಾ ನಾಯಕ್ – ಕಹಳೆ ನ್ಯೂಸ್

Cini Kahale : ಸಿನಿ ಲೋಕದಲ್ಲಿ ಮಿಂಚುತ್ತಿರುವವರ ಪೈಕಿ ಮಂಗಳೂರಿನ ಪ್ರತಿಭೆಗಳು ಅನೇಕರಿದ್ದಾರೆ. ಆ ಸಾಲಿನಲ್ಲಿ ಕುಡ್ಲದ ಕುವರಿ ಆದ್ಯಾ ನಾಯಕ್ ಹೆಸರು ಕೂಡಾ ಮುಂಚೂಣಿಯಲ್ಲಿದೆ. ಕನ್ನಡ, ತಮಿಳು, ಮಲಯಾಳಂ, ಕೊಂಕಣಿ, ತುಳು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸುತ್ತಿರುವ ತುಳುನಾಡಿನ ಅಪ್ಪಟ ಪ್ರತಿಭೆ ಆದ್ಯಾ ನಾಯಕ್ ಕೋಸ್ಟಲ್‌ವುಡ್‌ನಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಆದ್ಯಾ ಈಗಾಗಲೇ ಸಾಕಷ್ಟು ಸಿನಿಮಾ, ಟಿವಿ ಧಾರವಾಹಿಗಳು, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆಯವರ ಮುಂದಿನ ತುಳು ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತುಳುನಾಡ ಕುವರಿ ಕೋಸ್ಟಲ್‌ವುಡ್‌ನಲ್ಲಿ ಮಿಂಚಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಸಿಎ ಮಾಡಿರುವ ಆದ್ಯಾ ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಕಾಸ್ಟ್ಯೂಮ್ ಡಿಸೈನರ್‍ ಆಗಿಯೂ ಕೆಲಸ ಮಾಡಿದ್ದರು. ಅಲ್ಲದೆ ಪ್ರತಿಷ್ಠಿತ ಐಬಿಎಂನಲ್ಲಿ ಸಾಫ್ಟ್‌ವೇರ್‍ ಎಂಜಿನಿಯರ್‍ ಆಗಿ ಒಂದು ವರ್ಷ ಕೆಲಸ ಮಾಡಿದ್ದರು. ಬಳಿಕ ನಿರ್ದೇಶಕರೊಬ್ಬರು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದರಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಮೂಲತಃ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಬಾಲಕೃಷ್ಣ ನಾಯಕ್-ಎಂ. ಶ್ಯಾಮಲಾ ದಂಪತಿಯ ದ್ವಿತೀಯ ಪುತ್ರಿ ಆದ್ಯಾ ನಾಯಕ್‌ಗೆ ಎಳವೆಯಿಂದಲೇ ಫ್ಯಾಶನ್ ಡಿಸೈನ್‌ನಿಂಗ್‌ನಲ್ಲಿ ಆಸಕ್ತಿ. ಸದ್ಯ ಬಹುಭಾಷಾ ನಟಿಯಾಗಿ ಸಿನೆ ಲೋಕದಲ್ಲಿ ಆದ್ಯಾ ಬೆಳೆಯುತ್ತಿದ್ದಾರೆ.

ಇವರು ನಟಿಸಿರುವ ’ಬಾಯೋ’ ಕೊಂಕಣಿ ಚಿತ್ರದ ಆಡಿಯೋ ಮತ್ತು ಟ್ರೈಲರ್‍ ಇದೇ ಅಕ್ಟೋಬರ್ 30ಕ್ಕೆ ಬಿಡುಗಡೆಗೊಳ್ಳಲಿದೆ.ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾಗ ಮೊದಲು ಜ್ಯುವೆಲ್ಲರಿ ಸಂಸ್ಥೆಯೊಂದರ ಬ್ರಾಂಡ್‌ಗಾಗಿ ಮಾಡೆಲಿಂಗ್ ಮಾಡಿದ ಅವರು, ಬಳಿಕ ಸೀರೆ ಜಾಹೀರಾತು, ಸ್ವಚ್ಛ ಭಾರತ್‌ ಮಾಡೆಲ್ ಆಗಿ ಕಾಣಿಸಿಕೊಂಡರು. ಆ ಬಳಿಕ ನ್ಯಾಷನಲ್ ಬ್ರಾಂಡ್ ಮತ್ತು ಇಂಟರ್‌ನ್ಯಾಶನಲ್ ಬ್ರಾಂಡ್‌ಗಳ ಪ್ರಾಡಕ್ಟ್‌ ಜಾಹೀರಾತುಗಳಲ್ಲಿ ಅವಕಾಶ ಪಡೆದುಕೊಂಡರು.

ಇದರಿಂದ ಸಹಜವಾಗಿಯೇ ಸಿನೆಮಾಗಳಲ್ಲಿಯೂ ಅವಕಾಶ ಸಿಗಲು ಸಾಧ್ಯವಾಯಿತು ಎನ್ನುತ್ತಾರೆ ಆದ್ಯಾ. ಕನ್ನಡದಲ್ಲಿ ರತ್ನಗರ್ಭ, ಪಡ್ಡೆಹುಲಿ, ಒಂಬತ್ತನೇ ಅದ್ಬುತ, ಧಮಯಂತಿ, ನೋಟಗಾರ, ಬೀಗ, ಲಂಕೆ, ತಮಿಳಿನಲ್ಲಿ ಮೂಂಡ್ರಂ, ಅರಿವೆ, ಕ್ಯಾಲ, ಸ್ಕೆಚ್ ಚಿತ್ರದಲ್ಲಿ ಬಣ್ಣ ಹಚ್ಚಿರುವ ಆದ್ಯ, ಮಲಯಾಳಂನಲ್ಲಿ ಇನ್‌ಸ್ಟಾಗ್ರಾಂ ಎಂಬ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸಿದ್ದಾರೆ. ತಮಿಳು, ಮಲಯಾಳಂ, ಕನ್ನಡದಲ್ಲಿ ಮೂರು ಸಿನೆಮಾಗಳಿಗೆ ಸಹಿ ಮಾಡಿದ್ದಾರೆ. ಸೀತಾರಾಮ ಕಾರಂತ ಅವರ ಮುಂದಿನ ಕನ್ನಡ ಸಿನೆಮಾದಲ್ಲಿಯೂ ಆದ್ಯಾ ನಟಿಸಲಿದ್ದಾರೆ.