Recent Posts

Sunday, January 19, 2025
ಸುದ್ದಿ

ಉಡುಪಿಯಲ್ಲಿ ಚಿನ್ನಾಭರಣ‌ ತಯಾರಿಕಾ ಘಟಕದ ಮೇಲೆ ದಾಳಿ ; ಬಾಲ ಕಾರ್ಮಿಕರ ರಕ್ಷಣೆ – ಕಹಳೆ ನ್ಯೂಸ್

ಉಡುಪಿ‌ : ಮಕ್ಕಳನ್ನು‌ ಕೆಲಸಕ್ಕೆ ಬಳಸುತ್ತಿದ್ದ ಚಿನ್ನಾಭರಣ‌ ತಯಾರಕಾ ಘಟಕಗಳ ಮೇಲೆ ಕಾರ್ಮಿಕ‌ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ನಗರದ‌‌‌ ಚಿತ್ತರಂಜನ್ ಸರ್ಕಲ್ ಬಳಿಯಿರುವ ಚಿನ್ನಾಭರಣ‌ ತಯಾರಕಾ ಘಟಕದ ಮೇಲೆ ಧಿಡೀರ್ ದಾಳಿ ನಡೆಸಿದ ಕಾರ್ಮಿಕ‌ ಇಲಾಖಾಧಿಕಾರಿಗಳು ನಾಲ್ಕು ಮಂದಿ ಕೊಲ್ಕತ್ತ ಮೂಲದ ಮಕ್ಕಳನ್ನು ರಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದೇ ಕಟ್ಟದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರಿಂದ ಚಿನ್ನಾಭರಣ ತಯಾರಿಕೆ ಕೆಲಸ ನಡೆಯುತ್ತಿತ್ತು. ಬಾಲ ಕಾರ್ಮಿಕರು ಇರುವ ಬಗ್ಗೆ ಖಚಿತ ಮಾಹಿತಿ‌ ಮೇರೆಗೆ ಕಾರ್ಮಿಕ ಇಲಾಖೆ ಈ ದಾಳಿ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು