Recent Posts

Sunday, January 19, 2025
ಸುದ್ದಿ

ಶಿರೂರು: ವಿದ್ಯುತ್ ಅವಘಡ, ಉದ್ಯಮಿ, ಸಾಮಾಜಿಕ ಮುಖಂಡ ಸತೀಶ ಪ್ರಭು ನಿಧನ – ಕಹಳೆ ನ್ಯೂಸ್

ಶಿರೂರು: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಶಿರೂರಿನಲ್ಲಿ ನಡೆದಿದೆ.ಶಿರೂರಿನ ಬಿಜೆಪಿ ಮುಖಂಡ ಉದ್ಯಮಿ,ಜನಾನುರಾಗಿ,ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸತೀಶ ಸುಬ್ರಾಯ ಪ್ರಭು (52)ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿರೂರಿನಲ್ಲಿ ಕರಾಳ ಮಂಗಳವಾರ: ಪ್ರಗತಿಪರ ಕೃಷಿಕರು, ಅಜಾತಶತ್ರು,ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಸಾಮಾಜಿಕ ಕ್ಷೇತ್ರದಲ್ಲೂ ಪ್ರೀತಿಯಿಂದ ತೊಡಗಿಸಿಕೊಳ್ಳುವ ಜೊತೆಗೆ ಶಿರೂರಿನ ರಾಷ್ಟ್ದೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯರು,ಪೇಟೆ ವೆಂಕಟರಮಣ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಧಾರ್ಮಿಕ ಮುಂದಾಳು ಆಗಿರುವ ಸತೀಶ ಪ್ರಭುಗಳ ನಿಧನ ಶಿರೂರಿಗರಿಗೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಅಘಾತ ಉಂಟು ಮಾಡಿದೆ.ಸಾಮಾನ್ಯವಾಗಿ ಮಂಗಳವಾರ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಆದರೆ ಈ ಮಂಗಳವಾರ ಮಾತ್ರ ಶಿರೂರಿಗರಿಗೆ ಕರಾಳ ಮಂಗಳವಾರವಾಗಿ ಮಾರ್ಪಟ್ಟಿದೆ.ನಿವೃತ್ತ ಕಂದಾಯ ಅಧಿಕಾರಿ ಸುಬ್ರಾಯ ಪ್ರಭು ರವರ ಪುತ್ರರಾಗಿರುವ ಇವರು ಹಲವು ವರ್ಷ ಪ್ರಭು ಡ್ರೆಸ್‌ಲ್ಯಾಂಡ್ ಬಟ್ಟೆ ಮಳಿಗೆ ಮಾಲಕರಾಗಿದ್ದರು.ಹಲವಾರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಜೊತೆಗೆ ಪ್ರಧಾನ ಪೋಷಕರಾಗಿದ್ದರು. ಮಂಗಳವಾರ ಕೆಲಸದವರ ಜೊತೆ ತೆಂಗಿನಕಾಯಿ ಕಟಾವು ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ.ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿರುವುದರಿಂದ ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಆರಕ್ಷಕ ಇಲಾಖೆ,ವಿವಿಧ ಮುಖಂಡರು,ಹಿತೈಷಿಗಳು ಜಮಾಯಿಸಿದ್ದರು.ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ಮೃತರು ಪತ್ನಿ,ಎರಡು ಹೆಣ್ಣು ಮ್ಕಕ್ಕಳು,ಕುಟುಂಬದವರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ..