Recent Posts

Monday, January 20, 2025
ಸುದ್ದಿ

ಕಾಂತಾರ ‘ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ : ರಿಷಬ್ ಶೆಟ್ಟಿಯವರು ಮಾತು ಸುಳ್ಳು : ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ –ಕಹಳೆ ನ್ಯೂಸ್

ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ವಿಶ್ವಮಟ್ಟದಲ್ಲಿ ಸದ್ದು ಮಾಡ್ತಾ ಇದ್ದು ಬಾಕ್ಸ್ ಆಫೀಸ್ ಉಡೀಸ್ ಮಾಡುತ್ತಿದೆ. ಮೊದಲು ಕನ್ನಡದಲ್ಲಿ ತೆರೆಕಂಡು, 15 ದಿನಗಳ ನಂತರ ಪರಭಾಷೆಗೂ ಡಬ್ ಆಗಿ ಜನರನ್ನ ರಂಜಿಸ್ತಾ ಇದೆ ‘ಕಾಂತಾರ’ ಸಿನಿಮಾ. ಹಾಗೆಯೇ ಕನ್ನಡ ಸಿನೆಮಾ ನಟರು ಹಾಗೂ ಸಿನಿಪ್ರೇಮಿಗಳು ಕಾಂತಾರ ಸಿನೆಮಾವನ್ನ ಹಾಡಿ ಹೊಗಲಿದ್ದಾರೆ. ಈ ನಡುವೆ ಪರಭಾಷೆಯ ಸ್ಟಾರ್ ನಟರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡು ಮಾತನಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಕನ್ನಡದ ನಟ ಚೇತನ್ ಕೂಡ ‘ಕಾಂತಾರ’ ಸಿನಿಮಾದ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ..’ ಎಂದು ಹೊಗಳಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ಅವರ ಹೇಳಿಕೆಯೊಂದಕ್ಕೆ ಆಕ್ಷೇಪವನ್ನು ಎತ್ತಿದ್ದಾರೆ.

‘ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿAದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊAದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ..’ ಎಂದು ಬರೆದುಕೊಂಡಿದ್ದಾರೆ.