Saturday, November 23, 2024
ಸುದ್ದಿ

ಬೆಂಗಳೂರಿನಿ0ದ ಮಂಗಳೂರಿಗೆ ಬಂದಿದ್ದ ಬಾಲಕಿ ನಾಪತ್ತೆ – ಮಂಗಳೂರಿನಲ್ಲಿ ಸುತ್ತಾಡಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ : ಸುಳಿವು ಸಿಕ್ಕಿದಲ್ಲಿ ಮಾಹಿತಿ ನೀಡುವಂತೆ ಮನವಿ -ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರಿನ ಬಾಲಕಿ ನಾಪತ್ತೆಯಾಗಿ ಮಂಗಳೂರಿನಲ್ಲಿ ಪತ್ತೆಯಾಗಿ ಇದೀಗ ಮತ್ತೆ ಮಂಗಳೂರಿನಿAದ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಲಕ್ಷ್ಮೀ ಲೇಔಟ್‌ನ ಭಾರ್ಗವಿ (14) ಎಂಬಾಕೆ ನಾಪತ್ತೆಯಾದ ಬಾಲಕಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಟೋಬರ್ 17ರ ಸಂಜೆ 4.30ರಿಂದ ಈಕೆ ನಾಪತ್ತೆಯಾಗಿದ್ದು, 5 ಫೀಟ್ 3 ಇಂಚು ಎತ್ತರವಿದ್ದಾಳೆ. ನಾಪತ್ತೆಯಾಗುವ ದಿನದಂದು ಈಕೆ ಕೇಸರಿ ಬಣ್ಣದ ಬಟ್ಟೆ ಬೂದು ಬಣ್ಣದ ಜಾಕೆಟ್ ತೊಟ್ಟಿದ್ದಳು. ಇದೀಗ ಈ ಬಾಲಕಿ ಮಂಗಳೂರಿನಲ್ಲಿ ಸುತ್ತಾಡಿರುವುದರ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಬಾಲಕಿ ಭಾರ್ಗವಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ಸೋಮವಾರದಿಂದ ನಾಪತ್ತೆಯಾಗಿದ್ದಾಳೆ. ಅಲ್ಲಿಂದ ಬಸ್ ನಲ್ಲಿ ಆಗಮಿಸಿರುವ ಆಕೆ ಸೋಮವಾರ ಬೆಳಗ್ಗಿನ ಜಾವ 3 ಗಂಟೆಗೆ ಹೊತ್ತಿಗೆ ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ.

ಬಸ್ ನಿಲ್ದಾಣದಲ್ಲಿ ಆಟೊ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಮಾಡಿ ಮುಕ್ಕ ಬೀಚ್‌ಗೆ ತೆರಳಿ, ಅಲ್ಲಿ ಕೊಂಚ ಕಾಲ ತಿರುಗಾಡಿ, ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್ಗೆ ಆಗಮಿಸಿದ್ದಾಳೆ. ಬಳಿಕ ಪಾರ್ಕ್ ಬಳಿಯ ಬಾಲಭವನ ಸಮೀಪದ ಶೌಚಾಲಯಕ್ಕೆ ಹೋಗಿ ಮುಖ ತೊಳೆದಿದ್ದಾಳೆ. ಅಲ್ಲಿಂದ ವಾಪಸ್ ಅದೇ ರಿಕ್ಷಾದಲ್ಲಿ ಮತ್ತೆ ಕೆಎಸ್ಸಾರ್ಟಿಸಿಗೆ ತೆರಳಿದ್ದಾಳೆ. ಆಟೋ ಚಾಲಕನಲ್ಲಿ ತಾನು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದಾಳೆ ಎಂದು ರಿಕ್ಷಾ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆ ಬಳಿಕ ಬಾಲಕಿ ಯಾವ ಕಡೆ ಹೋಗಿದ್ದಾಳೆಂದು ಮಾಹಿತಿ ಲಭ್ಯವಿಲ್ಲ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಬಾಲಕಿ ಮನೆ ಬಿಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ವಿವಿಧೆಡೆ ಸಂಚರಿಸಿದ ರಿಕ್ಷಾ ಚಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಳ್ಳಲಾಗಿದೆ. ದೊರಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಈಕೆ ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದ ಕಾರಣ ಪೋಷಕರು ಬೈತಾರೆ ಅನ್ನುವ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿ ಭಾರ್ಗವಿ ಮೊನ್ನೆ ಸಂಜೆ ಗೊರಗುಂಟೆಪಾಳ್ಯದ ಮನೆಯಿಂದ ಟ್ತೂಷನ್‌ಗೆ ಅಂತ ತೆರಳಿದ್ದಳು. ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದ ಬಾಲಕಿ ಮೆಜೆಸ್ಟಿಕ್‌ನಿಂದ ಮಂಗಳೂರು ಬಸ್ ಹತ್ತಿ ಹೋಗಿರೋದು ತಿಳಿದು ಬಂದಿದೆ.

ಸದ್ಯ ಘಟನೆ ಸಂಬAಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಮಂಗಳೂರಿನಲ್ಲಿ ಬಾಲಕಿಗಾಗಿ ನಾಲ್ಕು ತಂಡ ತಲಾಶ್ ಮಾಡ್ತಿದೆ. ಇನ್ನೂ ಬಾಲಕಿ ಪತ್ತೆಯಾದ್ರೆ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಬಾಲಕಿ ಭಾರ್ಗವಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಈಕೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9972031021ನ್ನು ಸಂಪರ್ಕಿಸಲು ಸೂಚಿಸಲಾಗಿದೆ.