Friday, November 22, 2024
ಸುದ್ದಿ

ಅ. 25 ರಂದು ಪಾರ್ಶ್ವ ಸೂರ್ಯಗ್ರಹಣ : ಎಷ್ಟು ಗಂಟೆವರೆಗೆ ಇರಲಿದೆ ಸೂರ್ಯಗ್ರಹಣ..? –ಕಹಳೆ ನ್ಯೂಸ್

ಅಕ್ಟೋಬರ್ 25, 2022ರಂದು ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದೆ. ಖಗ್ರಾಸ ಸೂರ್ಯಗ್ರಹಣ ಸಮಯ ಭಾರತೀಯ ಕಾಲಮಾನದಲ್ಲಿ ಅಕ್ಟೋಬರ್ 25ರಂದು ಮಧ್ಯಾಹ್ನ 2:28ಕ್ಕೆ ಸೂರ್ಯಗ್ರಹಣ ಆರಂಭವಾಗುತ್ತದೆ. ಸಂಜೆ 6:32ರವರೆಗೂ ಗ್ರಹಣ ಇರುತ್ತದೆ. ಸೂರ್ಯಗ್ರಹಣದ ಉಚ್ಛ್ರಾಯ ಸ್ಥಿತಿ ಸಂಜೆ 4:30ಕ್ಕೆ ಆಗುತ್ತದೆ
ಅಕ್ಟೋಬರ್ 25ರಂದು ಸಂಭವಿಸುವ ಸೂರ್ಯಗ್ರಹಣವನ್ನು ಭೂಮಿಯ ಎಲ್ಲೆಡೆ ವೀಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ ಇದು ಕಾಣಸಿಗುವುದಿಲ್ಲ. ಯೂರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ, ಈಶಾನ್ಯ ಆಫ್ರಿಕಾದಿಂದ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ರಷ್ಯಾದ ಪಶ್ಚಿಮ ಸೈಬೀರಿಯಾದಲ್ಲಿ ಗ್ರಹಣ ಹೆಚ್ಚು ಅವಧಿ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಹಾಗೆ ನೋಡಿದರೆ ಕಣ್ಣಿಗೆ ಹಾನಿಯಾಗುತ್ತದೆ. ಕುರುಡುತನ ಬರಬಹುದು ಎಂದು ವೈದ್ಯರು ಹೇಳುತ್ತಾರೆ. ಸೂರ್ಯಗ್ರಹಣಗಳನ್ನು ವೀಕ್ಷಿಸಲು ಕೆಲ ಪರೋಕ್ಷ ತಂತ್ರಜ್ಞಾನಗಳ ವಿಧಾನಗಳುಂಟು. ಅದನ್ನು ಬಳಸಬಹುದು.