Sunday, January 19, 2025
ಉಡುಪಿ

ತುಳುನಾಡ ಭೂತಕೋಲ ಅವಹೇಳನ : ನಟ ಚೇತನ್ ವಿರುದ್ದ ದೂರು ದಾಖಲು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ : ತುಳುನಾಡಿನ ಆಸ್ತಿಕರ ನಂಬಿಕೆಯಾದ ಭೂತಕೋಲದ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ನಟ ಚೇತನ್ ವಿರುದ್ದ ದೂರು ದಾಖಲಾಗಿದೆ.

ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಪದೇ ಪದೇ ಧಕ್ಕೆ ತರುತ್ತಿರುವ ಕನ್ನಡದ ನಟ ಚೇತನ್ ವಿರುದ್ಧ ಹಿಂದು ಜಾಗರಣ ವೇದಿಕೆ‌ಯು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದೆ.

ಸಹಕಾರಿ ಧುರೀಣ ಬೋಳ ಸದಾಶಿವ ಶೆಟ್ಟಿ, ಕೆಎಂಎಫ್‌ ನಿರ್ದೇಶಕ ನರಸಿಂಹ ಕಾಮತ್‌, ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಸಂಯೋಜಕ್ ಸಂದೀಪ್ ಕಾರ್ಲ, ದೀಪಕ್ ಬೈಲೂರು, ಸುಭಾಶ್ಚಂದ್ರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಲ್ಕೆ ಸಮುದಾಯದ ದೀಪಕ್ ಕಿರಣ್ ಎಂಬುವವರು ಕೂಡ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ನಟ ಚೇತನ್ ವಿರುದ್ದ ಆಕ್ರೋಶ ತುಳುನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.