Sunday, January 19, 2025
ರಾಜಕೀಯರಾಜ್ಯರಾಮನಗರಸುದ್ದಿ

ಕ್ರೈಸ್ತ ಧರ್ಮ ಪ್ರಚಾರ – ಡಿಕೆಶಿ ಸ್ವಕ್ಷೇತ್ರದಲ್ಲಿ ಮತ್ತೆ ಏಸುಕ್ರಿಸ್ತನ ಜಪ ; ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಿಂದ ದೂರು ದಾಖಲು – ಕಹಳೆ ನ್ಯೂಸ್

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಮತ್ತೆ ಏಸುಕ್ರಿಸ್ತನ ಜಪ ಶರುವಾಗಿದ್ದು, ಧರ್ಮ ವಿವಾದದ ಬೆಂಕಿಗೆ ಪುನಃ ತುಪ್ಪ ಸುರಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಪಾಲ ಬೆಟ್ಟದದ ಏಸು ಕ್ರಿಸ್ತನ ಶಿಲಭೆ ವಿಚಾರದಲ್ಲಿ ಈ ಹಿಂದೆ ಧರ್ಮ ದಂಗಲ್​ ಏರ್ಪಟ್ಟಿತ್ತು.

ಇದೀಗ ರೇಷನ್ ಕಾರ್ಡ್ ಹಿಂದೆ ಏಸುಕ್ರಿಸ್ತನ ಫೋಟೋ ಮುದ್ರಣ ಮೂಲಕ ಮತ್ತೆ ಧರ್ಮ ವಿವಾದ ಮುನ್ನೆಲೆಗೆ ಬಂದಿದೆ.

ಕನಕಪುರದ ಕೋಡಿಹಳ್ಳಿ ಹೋಬಳಿ ಹಾಗೂ ಉಯ್ಯಂಬಳ್ಳಿ ಗ್ರಾಮದಲ್ಲಿ ಏಸುಕ್ರಿಸ್ತನ ಫೋಟೋ ಇರುವ ರೇಷನ್​ ಕಾರ್ಡ್​​ಗಳನ್ನು ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ ಎಂಬುವರು ರಾಮನಗರ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.

ಕಾಣದ ಕೈಗಳಿಂದ ಕ್ರೈಸ್ತ ಧರ್ಮ ಪ್ರಚಾರದ ನಡೆಯುತ್ತಿದೆ. ಬಡತನ ರೇಖೆಗಿಂತ ಕೆಳವರ್ಗದ ಜನರೇ ಅಗೋಚರ ಶಕ್ತಿಗಳ ಟಾರ್ಗೆಟ್ ಆಗಿದೆ ಎಂಬ ಆರೋಪವಿದೆ. ಪಡಿತರ ಬುಕ್​ನಲ್ಲಿ ಏಸು ಕ್ರಿಸ್ತನ ಪೋಟೋ ಪ್ರಿಂಟ್ ಆಗಲು ಕಾರಣ ಯಾರು ಎಂಬ ಪ್ರಶ್ನೆಗೆ ತನಿಖೆ ನಂತರ ಉತ್ತರ ತಿಳಿದುಬರಬೇಕಿದೆ.