Sunday, January 19, 2025
ಮಡಿಕೇರಿ

ಕುಶಾಲನಗರದ ರೈತಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಮುಕ್ತ ಕರಾಟೆ ಟೂರ್ನಮೆಂಟ್ 2022 –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾಭೂಮಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ (ರಿ.)ಕುಶಾಲನಗರ ಮತ್ತು ಕ್ರೀಡಾಭಾರತಿ ವತಿಯಿಂದ ಕುಶಾಲನಗರದ ರೈತಭವನದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕರಾಟೆ ಟೂರ್ನಮೆಂಟ್ 2022, ಭಾನುವಾರ ನಡೆದಿದೆ.

ಕಾರ್ಯಕ್ರಮವನ್ನು ಎಮ್. ಕೆ. ಚೇತನ್ ಚಂದ್ರ ಚೀಫ್ ಅರ್ಗನೈಸರ್ ಮತ್ತು ಕೊಡಗು ಜಿಲ್ಲಾ ಕ್ರೀಡಾಭಾರತಿ ಖಜಾಂಚಿ ಸಂದೇಶ್ ಆಚಾರ್ಯ, ಹಾಗೂ ಶಿವರಾಮ್ ಎಮ್. ಕೆ, ಯೋಗ ಮತ್ತು ಕರಾಟೆ ಶಿಕ್ಷಕರು, ಕಲಾಭೂಮಿ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕರು, ಕ್ರೀಡಾಭಾರತಿ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇವರು ಕಾರ್ಯಕ್ರಮವನ್ನು ಆಯೋಜಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೇರಳ, ಮೈಸೂರು, ತುಮಕೂರು, ಮಂಡ್ಯ, ಬೆಂಗಳೂರು, ಕೊಡಗು ಇಷ್ಟು ಕಡೆಗಳಿಂದ ಸರಿಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಗ್ರ‍್ಯಾಂಡ್ ಮಾಸ್ಟರ್ ಸಿ. ಎಸ್. ಅರುಣ್ ಮಾಚಯ್ಯ, 7ತ್ ಡಾನ್ ಬ್ಲಾಕ್ ಬೆಲ್ಟ್, ಡಬ್ಲ್ಯೂ ಕೆ ಎಫ್ / ಪ್ರೆಸಿಡೆಂಟ್ ಆಫ್ ಸೌತ್ ಇಂಡಿಯನ್ ಕರಾಟೆ ಫೆಡರೇಷನ್, ಎ ಇ ಎಸ್ ಇ ಎ, ಕ್ರೀಡಾಭಾರತಿ ರಾಜ್ಯ ಸಹಕಾರ್ಯದರ್ಶಿ ಬಸವರಾಜ್, ಕ್ರೀಡಾಭಾರತಿ ರಾಜ್ಯಕಾರ್ಯಕಾರಿಣಿ ಭೋಜರಾಜ್ ಕಲ್ಲಡ್ಕ, ವಿ. ಪಿ. ಶಶಿಧರ್, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.