Recent Posts

Sunday, January 19, 2025
ಕ್ರೈಮ್ರಾಷ್ಟ್ರೀಯಸುದ್ದಿ

ಬೌದ್ಧ ಭಿಕ್ಷುಗಳ ವೇಷ ಧರಿಸಿ ವಾಸಿಸುತ್ತಿದ್ದ ಶಂಕಿತ ಚೀನಿ ಬೇಹುಗಾರ್ತಿಯ ಬಂಧನ : ದಿಲ್ಲಿ ಪೊಲೀಸ್ – ಕಹಳೆ ನ್ಯೂಸ್

ಹೊಸದಿಲ್ಲಿ: ಉತ್ತರ ದೆಹಲಿಯ ಟಿಬೇಟಿಯನ್ ನಿರಾಶ್ರಿತರ ವಸಾಹತುವಿನಲ್ಲಿ (Tibetan refugee settlement) ಬೌದ್ಧ ಭಿಕ್ಷುಗಳ ವೇಷ ಧರಿಸಿ ವಾಸಿಸುತ್ತಿದ್ದ ಶಂಕಿತ ಚೀನಿ ಬೇಹುಗಾರ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಕೆಯ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ದೋಲ್ಮಾ ಲಾಮಾ ಎಂಬ ಹೆಸರು ಇದೆ. ನೇಪಾಳ ರಾಜಧಾನಿ ಕಠ್ಮಂಡುವಿನ ವಿಳಾಸವಿದೆ. ಆದರೆ ಆಕೆಯ ನೈಜ ಹೆಸರು ಕಾಯ್ ರ್ಯೂ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಿವಿ ಉತ್ತರ ಕ್ಯಾಂಪಸ್‍ನ ಬಳಿಯ ಟಿಬೇಟಿಯನ್ ನಿರಾಶ್ರಿತರ ಕಾಲೋನಿಯ ‘ಮಜ್ನು ಕಾ ತಿಲ್ಲಾ’ (Majnu Ka Tilla) ಪ್ರದೇಶದಲ್ಲಿ ಈಕೆ ವಾಸವಿದ್ದಳು ಎನ್ನಲಾಗಿದೆ. ಬೌದ್ಧಭಿಕ್ಷುವಿನಂತೆ ವೇಷ ಧರಿಸಿ ವಾಸವಿದ್ದ ಈಕೆ ತಲೆ ಬೋಳಿಸಿಕೊಂಡು ಸಾಂಪ್ರದಾಯಿಕ ಕಡುಕೆಂಪು ಬಣ್ಣದ ರುಮಾಲು ಧರಿಸಿದ್ದಳು ಎಂದು ವರದಿಯಾಗಿದೆ.

ಈಕೆಯ ದಾಖಲೆಗಳನ್ನು ವಿದೇಶೀಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಬಳಿ ಪರಿಶೀಲಿಸಿದಾಗ ಚೀನಾದ ಪಾಸ್‍ಪೋರ್ಟ್ ಬಳಸಿಕೊಂಡು ಚಾಯ್ ರ್ಯೂ 2019ರಲ್ಲಿ ಭಾರತಕ್ಕೆ ಆಗಮಿಸಿದ್ದು ದೃಢಪಟ್ಟಿದೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಮುಖಂಡರು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ವಿಚಾರಣೆ ವೇಳೆ ಆಕೆ ಹೇಳಿದ್ದಾಳೆ. ಈಕೆ ಇಂಗ್ಲಿಷ್, ಮಾಂಡ್ರಿಯನ್ ಹಾಗೂ ನೇಪಾಳಿ ಭಾಷೆ ಮಾತನಾಡಬಲ್ಲಳು. ದೆಹಲಿ ಪೊಲೀಸರು ಈಕೆಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.