Recent Posts

Monday, January 20, 2025
ಸುದ್ದಿ

“ನನ್ನ ಸಾವಿಗೆ ನಾನೇ ಕಾರಣ” ಪತ್ರ ಬರೆದಿಟ್ಟು ವ್ಯಕ್ತಿ ನಾಪತ್ತೆ – ಕಹಳೆ ನ್ಯೂಸ್

ಉಡುಪಿ : ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು ವ್ಯಕ್ತಿಯೊಬ್ಬರ ನಾಪತ್ತೆಯಾಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೇಜಾರು ನಿಡಂಬಳ್ಳಿ ನಿವಾಸಿ ಪ್ರವೀಣ್ ಬೆಳ್ಚಡ (44) ಕಾಣೆಯಾದ ವ್ಯಕ್ತಿ. ಅಕ್ಟೋಬರ್ 18 ರಂದು ಪ್ರವೀಣ್ ಮನೆ ಬಿಟ್ಟು ತೆರಳಿದ್ದು ಬಳಿಕ ಹಿಂತಿರುಗಲಿಲ್ಲ. ಆರು ವರ್ಷಗಳ ಹಿಂದೆ ಪ್ರವೀಣ್ ಅವರು ಸಂಧ್ಯಾಳನ್ನು ಮದುವೆಯಾಗಿದ್ದು, ದಂಪತಿ ನಡುವೆ ಕೌಟುಂಬಿಕ ಮನಸ್ತಾಪವಿದ್ದು, ಅವರ ಪತ್ನಿ ಮತ್ತು ಮಗು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಪ್ರವೀಣ್ ಮನೆಗೆ ಬೀಗ ಹಾಕಿ ಕೀಯನ್ನು ಹೊರಗೆ ಇಟ್ಟಿರುವ ಬಗ್ಗೆ ಪ್ರವೀಣ್ ಪಕ್ಕದ ಮನೆಯವರು ಪ್ರಕಾಶ್ ಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮನೆ ತೆರೆದು ನೋಡಿದಾಗ ನಾಪತ್ತೆಯಾಗಿದ್ದ ಪ್ರವೀಣ್ ತನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದ ಪತ್ರದಲ್ಲಿತ್ತು. ಪ್ರವೀಣ್ 5.6 ಅಡಿ ಎತ್ತರ ಮತ್ತು ಗೋಧಿ ಮೈಬಣ್ಣ ಹೊಂದಿದ್ದಾನೆ. ಪ್ರವೀಣ್ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಸಾರ್ವಜನಿಕರು ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.