Recent Posts

Monday, January 20, 2025
ಸುದ್ದಿ

ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ – ಕಹಳೆ ನ್ಯೂಸ್

ಬೆಳ್ತಂಗಡಿ : ಹಿಂದೂ ಸಮಾಜಕ್ಕಾಗಿ ಹಲಾಲ್ ರಹಿತ ವಸ್ತುಗಳನ್ನು ಒದಗಿಸಿಕೊಡುವ ಬಗ್ಗೆ ಹಾಗೂ ಹಿಂದುಗಳ ಆಸ್ತಿಯನ್ನು ಕಬಳಿಸುವ ಅಪರಿಮಿತ ಹಕ್ಕನ್ನು ಹೊಂದಿರುವ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಮೂಲಕ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಆಗ್ರಹ ಮಾಡುವ ಮೂಲಕ ಉಪ ತಹಸೀಲ್ದಾರಾದ ಶ್ರೀ ಮತಿ ಜಯ. K ಇವರಿಗೆ ಮನವಿಯನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಕೀಲರು ಶ್ರೀ ಉದಯ ಬಂದಾರು ಬೆಳ್ತಂಗಡಿ, ಇವರು ಮಾತನಾಡುತ್ತಾ. ವಕ್ಫ್ ಕಾಯ್ದೆಯಲ್ಲಿ ಕಾಂಗ್ರೆಸ್ ಸರಕಾರ ವಕ್ಫ್ ಮಂಡಳಿಗೆ ಅಸೀಮ ಅಧಿಕಾರ ನೀಡಿದೆ. ಮುಸಲ್ಮಾನರ ಧಾರ್ಮಿಕ ಆಸ್ತಿಯನ್ನು ರಕ್ಷಿಸಲು ಈ ಕಾನೂನನ್ನು ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಕಾನೂನಿನ ಮೂಲಕ ಹಿಂದೂಗಳ ಮನೆ,ಅಂಗಡಿ, ಕೃಷಿ, ಭೂಮಿ ಮತ್ತು ಧಾರ್ಮಿಕ ಸ್ಥಳಗಳು ಮಾತ್ರವಲ್ಲದೆ ಸರಕಾರಿ ಆಸ್ತಿಯನ್ನು ಸುಲಭವಾಗಿ ಕಬಳಿ ಸಬಹುದು. ಇಡೀ ದೇಶದಲ್ಲಿ ಈ ಕಾನೂನು ದುರುಪಯೋಗವಾಗುತ್ತಿರುವ ಲ್ಯಾಂಡ್ ಜಿಹಾದ್ ಆಗಿದೆ. ಧಾರ್ಮಿಕ ಭೇದಭಾವ ಮಾಡುವ ಸಂವಿಧಾನ ವಿರೋಧಿಯಾದ ಈ ಕರಾಳ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕೆಂದು ಉದ್ದೇಶಿಸಿ ಮಾತನಾಡಿದರು.

ಸನಾತನ ಸಂಸ್ಥೆಯ ಶ್ರೀ ಆನಂದ ಗೌಡ ಇವರು ಮಾತನಾಡುತ್ತಾ, ಹಲಾಲ್ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಉತ್ಪನ್ನಗಳಲ್ಲಿ ಹೇರಲಾಗುತ್ತಿದೆ. ಇದು ಭಾರತೀಯ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿದ್ದು ಭಾರತದ ರಾಜ್ಯಗಳಲ್ಲಿ ಈ ಕುರಿತು ಜನಜಾಗೃತಿ ಮಾಡಲಾಗುತ್ತಿದೆ. ಆದುದರಿಂದ ದೀಪಾವಳಿ ಸಂದರ್ಭದಲ್ಲಿ ಹಲಾಲ್ ಉತ್ಪನ್ನಗಳನ್ನು ಬಳಕೆ ಮಾಡದೆ ದೀಪಾವಳಿ ಹಬ್ಬವನ್ನು ಹಲಾಲ್ ಮುಕ್ತ ದೀಪಾವಳಿ ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಬಜರಂಗದಳ ಸಂಚಾಲಕ ರಾದಂತಹ ಶ್ರೀ ಭಾಸ್ಕರ್ ಧರ್ಮಸ್ಥಳ ಇವರು ಮಾತನಾಡುತ್ತಾ, ಹಿಂದುಗಳು ಕೇವಲ ದೀಪಾವಳಿಗೆ ಮಾತ್ರವಲ್ಲ ಯಾವುದೇ ಕಾರಣಕ್ಕೂ ಹಲಾಲ್ ವಸ್ತುಗಳನ್ನು ಉಪಯೋಗಿಸಬಾರದು ಹಾಗೂ ನಾವು ಯಾರು ಕೂಡ ಮುಸ್ಲಿಮರ ಅಂಗಡಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಶ್ರೀ ಪುನೀತ್ ಮೇಲಂತಬೆಟ್ಟು, ಮುರಳಿಧರ ಅಧ್ಯಕ್ಷರು ಶಾರದೋತ್ಸವ ಸಮಿತಿ ಬೆಳ್ತಂಗಡಿ, ಶ್ರೀ ಮೋಹನ್ ವಿಶ್ವಹಿಂದು ಪರಿಷತ್ ಬೆಳ್ತಂಗಡಿ, ಲೋಕೇಶ್ ರಾವ್ ರಾಮಸೇನಾ ಜಿಲ್ಲಾ ಅಧ್ಯಕ್ಷರು,ರಾಘವ ಪ್ರಭು ಕುತ್ತಿನ,ಚಿದಾನಂದ,ಶ್ರೀನಿವಾಸ ಗೌಡ,ಉದಯ ನಾಯ್ಕ್ ಕೊಯ್ಯೂರು, ಯಶವಂತ್ ಕೊಯ್ಯೂರು, ವಸಂತ್ ಬಂಗೇರ, ವಸಂತ ನಾವೂರ, ಯಶವಂತ ಬಾಳಿಗ, ನೆರಿಯ ಆನಂದ, ಉಪಸ್ಥಿತರಿದ್ದರು.