Monday, January 20, 2025
ಸುದ್ದಿ

ವೀರಕಂಬ ಮಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಣ ಚಿತ್ತಾರದೊಂದಿಗೆ ಶಾಲಾ ತರಗತಿಗಳ ಸೌಂದರ್ಯೀಕರಣ ಕಾರ್ಯಕ್ರಮ – ಕಹಳೆ ನ್ಯೂಸ್

ವೀರಕಂಭ : ಸರಕಾರಿ ಶಾಲೆಗಳು ಕೇವಲ ಪುಸ್ತಕದ ವಿದ್ಯೆಯನ್ನಷ್ಟೇ ಕೊಡುವುದಲ್ಲ ಅದು ಬದುಕಿನ ಹಾದಿಯನ್ನೂ ತಿಳಿಸುತ್ತದೆ. ಮಾತೃಭಾಷಾ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ಜನರು ಇಂದು ಉನ್ನತ ಸ್ಥಾನದಲ್ಲಿ ಇರುವ ಹಲವಾರು ಉದಾಹರಣೆಗಳಿವೆ ಆದ್ದರಿಂದ ಕಲಿಕೆಯು ಅಂಕಗಳಿಗೆ ಸೀಮಿತವಾಗಿರದೇ ಬದುಕಿಗೆ ಹತ್ತಿರವಾಗಿರಬೇಕು ಎಂದು ಮಜಿ ವೀರಕಂಭ ಶಾಲೆಯ ದತ್ತು ಸಮಿತಿಯ ಅಧ್ಯಕ್ಷರಾದ ಸುರತ್ಕಲ್ ಶ್ರೀಮಾತಾ ಡೆವಲಪರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಸ್ಕೂಲ್ ಬೆಲ್ ಕ್ಯಾಂಪಸ್ ಟು ಕಮ್ಯೂನಿಟಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಇದರ ಸಹಯೋಗದಲ್ಲಿ ಪ್ರಥಮ ದರ್ಜೆ ಕಾಲೇಜ್ ವಿಟ್ಲ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ವರ್ಣ ಚಿತ್ತಾರದೊಂದಿಗೆ ಶಾಲಾ ತರಗತಿಗಳ ಸೌಂದರ್ಯೀಕರಣ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಿಕೆಯು ಪ್ರತಿಯೊಂದು ಹಂತದಲ್ಲಿಯೂ ನಡೆಯುತ್ತದೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡವರಿಗೆ ಯಾವುದೇ ವಿಷಯದಲ್ಲೂ ಸೋಲಾಗುವುದಿಲ್ಲ ಎಂದು ಈ ಕಾರ್ಯಕ್ರಮದಲ್ಲಿ ತಮ್ಮ ಕೈಚಳಕ ತೋರಿಸಲು ಭಾಗಿಯಾಗುವ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿಧ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶ್ರೀಜಾರವರು ಹುರಿದುಂಬಿಸಿದರು.

ಶಾಲೆಯು ಊರ ಕಲಶವಿದ್ದಂತೆ ಅದರ ಸೌಂದರ್ಯದ ಕೆಲಸಕ್ಕಾಗಿ ದುಡಿಯುವ ಸಹಕರಿಸುವ ಅದೆಷ್ಟೋ ಕೈಗಳು ಜೊತೆಗೆ ನಿಲ್ಲತ್ತವೆ ಅದರ ಅವಕಾಶವನ್ನು ಪಡೆದುಕೊಂಡಾಗ ಎಲ್ಲಾ ಕೆಲಸಗಳು ಅಚ್ಚುಗಟ್ಟಾಗಿ ನಡೆಯುತ್ತವೆ ಅದಕ್ಕಾಗಿ ಹಿರಿಯ ವಿಧ್ಯಾರ್ಥಿಗಳು ತಮ್ಮ ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಮೂಲ್ಯರವರು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಈ ಉತ್ತಮ ಕೆಲಸಕ್ಕೆ ಕಾರಣರಾದ ಅಖಿಲಭಾರತ ವಿಧ್ಯಾರ್ಥಿ ಪರಿಷತ್ ಇದರ ಜಿಲ್ಲಾ ಸಂಚಾಲಕರಾದ ಶ್ರೀ ದಿನೇಶ್ ಕೊಯಿಲ , ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮೈರ, ಸ್ಕೂಲ್ ಬೆಲ್ ಸಂಘಟನೆಯ ಚಿತ್ರ ಕಲಾವಿದರಾದ ಶ್ರೀ ಅರ್ಚನ್, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ, ಎನ್,ಎಸ್,ಎಸ್ ಘಟಕದ ಸಂಯೋಜಕರಾದ ಶ್ರೀಮತಿ ಜ್ಯೋತಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಕಾಲೇಜು ವಿಟ್ಲ ದ ಎನ್.ಎಸ್.ಎಸ್. ವಿಧ್ಯಾರ್ಥಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕರು, ಹಾಜರಿದ್ದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಸಹ ಶಿಕ್ಷಕಿ ಅನುಷಾ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮರವರು ಕಾರ್ಯಕ್ರಮ ನಿರೂಪಿಸಿದರು.