Monday, January 20, 2025
ಸುದ್ದಿ

ಕುಂದಾಪುರ : ಸರಕಾರಿ ಪದವಿಪೂರ್ವ ಕಾಲೇಜಿನ ಬೋರ್ಡ್ ಹೈಸ್ಕೂಲಿನ ಎನ್ನೆಸ್ಸೆಸ್ ಘಟಕ ಹಾಗೂ ಆಯುಷ್ ಇಲಾಖೆ ಉಡುಪಿ ಮತ್ತು ಆಯುಷ್ ಆಸ್ಪತ್ರೆ ಕುಂದಾಪುರ ಇವರ ಸಹಯೋಗದೊಂದಿಗೆ ನಡೆದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ : ಯೋಗದೊಂದಿಗೆ ಆರೋಗ್ಯ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಕುಂದಾಪುರ ” ಭಾರತೀಯ ಪರಂಪರೆಯ ಮೂಲವಾದ ಯೋಗ ಇಂದು ಇಡೀ ವಿಶ್ವಕ್ಕೆ ಪಸರಿಸಿದ್ದು ಯೋಗದಿಂದ ಆರೋಗ್ಯ ವೃದ್ಧಿಯ ಮಹತ್ವ ಇಡೀ ವಿಶ್ವಕ್ಕೆ ಪರಿಚಯವಾದ್ದರಿಂದ ಇಂದು ಯೋಗಕ್ಕೆ ಇಡೀ ವಿಶ್ವದ ಮನ್ನಣೆ ದೊರೆತಿದೆ” ಎಂದು ಕುಂದಾಪುರ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಶಿಲ್ಪಾರವರು ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಎನ್ನೆಸ್ಸೆಸ್ ಘಟಕ ಹಾಗೂ ಆಯುಷ್ ಇಲಾಖೆ ಉಡುಪಿ ಮತ್ತು ಆಯುಷ್ ಆಸ್ಪತ್ರೆ ಕುಂದಾಪುರ ಇವರ ಸಹಯೋಗದೊಂದಿಗೆ ನಡೆದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ “ಯೋಗದೊಂದಿಗೆ ಆಯುರ್ವೇದ ” ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂದಾಪುರ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ಅಶೋಕ್ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು ಸಂಸ್ಥೆಯ ಉಪ ಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಎನ್ನೆಸ್ಸೆಸ್ ಘಟಕದ ನಾಯಕಿ ಕುಮಾರಿ ಭೂಮಿಕಾ ಸಭೆಯಲ್ಲಿ ಉಪಸ್ಥಿತರಿದ್ದರು ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಉದಯ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು ಎನ್ನೆಸ್ಸೆಸ್ ಸ್ವಯಂ ಸೇವಕಿ ಸುಷ್ಮಿತಾ ಕಾರ್ಯಕ್ರಮ ನಿರೂಪಿಸಿ ಕುಮಾರಿ ಚೈತ್ರ ಸ್ವಾಗತಿಸಿ ಭೂಮಿಕಾ ವಂದಿಸಿದರು