Tuesday, January 21, 2025
ಸುದ್ದಿ

ಕುಂಜತ್ ಬೈಲ್ ದಕ್ಷಿಣ 15ನೇ ವಾರ್ಡ್‍ನ ಪಳನೀರು ರಸ್ತೆಯ ಅಗಲೀಕರಣಕ್ಕೆ ಜಾಗದ ಮಾಲೀಕರ ತಕರಾರು : ಮಾತುಕಥೆ ಮೂಲಕ ಇತ್ಯರ್ಥಗೊಳಿಸಿದ ಶಾಸಕರಾದ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಕುಂಜತ್ ಬೈಲ್ ದಕ್ಷಿಣ 15 ನೇ ವಾರ್ಡ್‍ನ ಪಳನೀರು ರಸ್ತೆಯ ಅಗಲೀಕರಣದ ಬಗ್ಗೆ ಜಾಗದ ಮಾಲೀಕರ ತಕರಾರು ಇದ್ದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರಾದ ಡಾ. ಭರತ್ ಶೆಟ್ಟಿಯವರು ಪಳನೀರಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದ ಮಾತುಕಥೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ತಡೆಗೋಡೆ ಸಹಿತ ರಸ್ತೆ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಮೂಲಕ ಅಗಲೀಕರಣದ ಕಾಮಗಾರಿಗಿದ್ದ ಎಲ್ಲಾ ತೊಂದರೆಗಳು ಪರಿಹಾರವಾಗಿದ್ದು, ನಾಗರಿಕರು ಶಾಸಕರನ್ನು ಅಭಿನಂದಿಸಿದ್ದಾರೆ.