Tuesday, January 21, 2025
ಸುದ್ದಿ

ಸುರತ್ಕಲ್ ಶ್ರೀಕಾಂತೇರಿ ದೈವಸ್ಥಾನದ ಹಿಂಬದಿಯಿ0ದ ಚಿರಂತನ ಆಶ್ರಮ ಕೂಡು ರಸ್ತೆಯವರೆಗೆ ಕಾಂಕ್ರಿಟೀಕರಣ : ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ – ಕಹಳೆ ನ್ಯೂಸ್

ಸುರತ್ಕಲ್: ಇಲ್ಲಿನ ಶ್ರೀಕಾಂತೇರಿ ದೈವ ಸ್ಥಾನದ ಹಿಂಬದಿಯಿಂದ ಚಿರಂತನ ಆಶ್ರಮ ಕೂಡು ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆಯ ಅನುದಾನದ 1ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿಗೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು
ಸುರತ್ಕಲ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಪ್ರಮುಖ ರಸ್ತೆಗಳ ಕಾಂಕ್ರಟೀಕರಣ ,ಜಂಕ್ಷನ್ ಅಭಿವೃದ್ಧಿ ಹಾಗೂ ಸುರತ್ಕಲ್ ಸರ್ಕಲ್ ಗೆ ವೀರ ಸಾವರ್ಕರ್ ಮತ್ತು ಬೋಂದೆಲ್ ಜಂಕ್ಷನ್ ಗೆ ಸರ್ವಜ್ಞ ಸರ್ಕಲ್ ಹೆಸರಿಡಲು ತೀರ್ಮಾನಿಸಲಾಗಿದೆ ಎಂದರು.
ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಸರಿತಾ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷರು ಶಕೀಲಾ ಕಾವ, ಮ. ನ. ಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಶೋಭಾ ರಾಜೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಬೂತ್ ಅಧ್ಯಕ್ಷರು ಅನಿಲ್ ಸಾಲ್ಯಾನ್, ಕಾರ್ಯದರ್ಶಿ ಲೀಲಾಧರ್ ಶೆಟ್ಟಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಗುತ್ತಿಗೆದಾರರು ಸುಧಾಕರ್ ಪೂಂಜಾ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.