Monday, November 25, 2024
ಸುದ್ದಿ

ಉಡುಪಿ : ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. : ‘ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್’ ಕಾಂಗ್ರೆಸ್ ಪಕ್ಷವೇ ಶಿವರಾಜ್ ಪಾಟೀಲ್ ಬಾಯಿಂದ ಹೇಳಿಸಿದೆಯಾ? : ಉಡುಪಿಯಲ್ಲಿ ಸಚಿವ ಸುನಿಲ್ ಕುಮಾರ್ –ಕಹಳೆ ನ್ಯೂಸ್

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ……
ಇಂಧನ ಸಚಿವ ಸುನಿಲ್ ಕುಮಾರ್ ಇಂದು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿಒ ಮಾತನಾಡಿರುವ ಇವರು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜೊತೆಗೆ ದೀಪಾವಳಿಗೂ ಲೋಡ್ ಶೆಡ್ಡಿಂಗ್ ಇಲ್ಲ. ಇದರಿಂದ ಗ್ರಾಹಕರಿಗೆ ಬೇಸಿಗೆ ಕಾಲದಲ್ಲಿ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಉತ್ಪಾದನೆ ಹೆಚ್ಚಿಸಿ ಸೂಕ್ತ ಸರಬರಾಜು ಮಾಡುತ್ತೇವೆ. ಕಳೆದ ಬಾರಿ ಇತಿಹಾಸದಲ್ಲೇ ಅತಿ ಹೆಚ್ಚು ವಿದ್ಯುತ್‌ಗೆ ಬೇಡಿಕೆ ಬಂದಿತು.್ತ ರಾಜ್ಯದ 14800 ಮೆ.ವ್ಯಾಟ್ ವಿದ್ಯುತ್ ನಿರ್ವಹಣೆ ಮಾಡಿದ್ದೇವೆ. ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಸಿಎಂಗೆ ಮನವಿ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಬಾರದು ಎಂದು ಕೆಆರ್‌ಸಿ ಗೆ ವಿನಂತಿಸಲಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಆಯ್ಕೆ ವಿಚಾರ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಆಯ್ಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಬಹಳ ತಡವಾಗಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಎಚ್ಚೆತ್ತುಕೊಂಡಿದೆ. ಕಾಂಗ್ರೆಸ್ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಹಿರಿಯ ಮುತ್ಸದ್ಧಿಯ ಆಯ್ಕೆ ಮಾಡಲಾಗಿದೆ. ಅಧ್ಯಕ್ಷನೂ ಬೇಕು, ಹೇಳಿದಾಗೆಯೂ ಕೇಳಬೇಕು, ಎಂಬ ಉದ್ದೇಶ ಇದರ ಹಿಂದೆ ಇದೆ. ಆಡಳಿತವನ್ನು ಗಾಂಧಿ ಕುಟುಂಬವೇ ನಡೆಸಬೇಕು ಎಂಬ ಇರಾದೆ ಇದೆ. ಮಲ್ಲಿಕಾರ್ಜುನ ಖರ್ಗೆ ನೆಪ ಮಾತ್ರದಾ ಅಧ್ಯಕ್ಷ. ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಶಶಿ ತರುವವರು ಆಕ್ಷೇಪಿಸಿದ್ದಾರೆ. ಕಾಂಗ್ರೆಸ್ 75 ವರ್ಷದ ನಂತರ ಮತದಾರರ ಪಟ್ಟಿ ತಯಾರಿಸಿದೆ. ಬಿಜೆಪಿಯಲ್ಲಿ ಬೂತ್ ನಿಂದ ರಾಷ್ಟ್ರಾಧ್ಯಕ್ಷರ ವರೆಗೆ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಬಿಜೆಪಿ ಆಂತರಿಕ ಚುನಾವಣೆ ಆರು ತಿಂಗಳುಗಳ ಸುಧೀರ್ಘ ಅವಧಿಯಲ್ಲಿ ನಡೆಯುತ್ತದೆ ಎಂದಿದ್ದಾರೆ.

ದೈವ ನರ್ತಕರಿಗೆ ಮಾಶಾಸನ ಕೊಡುವ ವಿಚಾರ
ರಾಜ್ಯ ಸರ್ಕಾರ ರಾಜ್ಯದ 58 ವರ್ಷ ಮೇಲ್ಪಟ್ಟ ದೈವನರ್ತಕರಿಗೆ ಮಾಸಶಾನ ನೀಡುವ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಇಲಾಖೆ ಅಧಿಕಾರಿಗಳು ದೈವನರ್ತಕ ಸಂಘದ ಮೂಲಕ ದೈವನರ್ತಕರ ಗಣತಿ ಪ್ರಕ್ರಿಯೆ ನಡೆಯಲಿದೆ. ಸರಕಾರ ಅಭಿಯಾನ ನಡೆಸಿ ನೋಂದಣಿ ಪ್ರಕ್ರಿಯೆ ನಡೆಸಲಿದೆ. ದೈವ ನರ್ತಕರ ಸಮುದಾಯ ಭವನಕ್ಕೆ ಹಣಕಾಸಿನ ಕೊರತೆ ಇಲ್ಲ. ಸಮುದಾಯಕ್ಕೆ ಬೇಕಾದ ಚಟುವಟಿಕೆಗಳನ್ನು ಮಾಡಲು ಸರಕಾರ ಸಹಾಯ ಮಾಡುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರು ತಿಳಿಸಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಸಮಾಜದಲ್ಲಿ ಬದಲಾವಣೆ ಆಗಲಿ
ನಮ್ಮ ಜಿಲ್ಲೆಯ ವ್ಯಕ್ತಿಗಳು ಮಾಡಿದ ಚಿತ್ರದ ಬಗ್ಗೆ ಖುಷಿಯಿದ್ದು ದೈವರಾಧನೆಯನ್ನು ಬಹಳ ಚೆನ್ನಾಗಿ ಬಿಂಬಿಸಿದ್ದಾರೆ. ನಟನೆಯ ಜೊತೆ ದೈವದ ಕೃಪೆಯಿಂದ ಚಿತ್ರ ಯಶಸ್ವಿಯಾಗಿದೆ. ಕಾಂತಾರ ತುಳುನಾಡ ಸಂಸ್ಕೃತಿಗೆ ಸಿಕ್ಕ ಗೌರವ ನಂಬಿಕೆಯಿAದ ದೂರ ಇರುವವರು ಅದನ್ನು ಆಕ್ಷೇಪಿಸುತ್ತಾರೆ. ನಮ್ಮ ಜಿಲ್ಲೆಯ ಜನ ನಂಬಿಕೆ ಮತ್ತು ಶ್ರದ್ಧೆಯಿಂದ ಬದುಕುವರು. ದೈವ ಎಂಬುದು ನಮ್ಮ ನಂಬಿಕೆ ದೈವದ ಮೂಲಕ ನಮ್ಮ ದಿನಚರಿ ಆರಂಭವಾಗುತ್ತದೆ. ನಂಬಿಕೆ ಸಂಸ್ಕೃತಿ ಇಲ್ಲದವರು ವ್ಯತರಿಕ್ತವಾಗಿ ಮಾತನಾಡುತ್ತಾರೆ. ನಂಬಿಕೆ ಶ್ರದ್ಧೆ ಇರುವವರು ಅದಕ್ಕೆ ಪ್ರತಿಕ್ರಿಯೆ ಕೊಡಬೇಕಾಗಿಲ್ಲ. ನಾಟಕ ಸಿನಿಮಾಗಳು ಕಾಲಕಾಲಕ್ಕೆ ಸಮಾಜವನ್ನು ಎಚ್ಚರಿಸಬೇಕು ಸತ್ಯ ಹರಿಶ್ಚಂದ್ರ ನಾಟಕ ಗಾಂಧೀಜಿಯನ್ನು ಸತ್ಯ ಹೇಳುವಂತೆ ಮಾಡಿತು. ಕಾಂತಾರ ಸಿನಿಮಾ ಸಮಾನತೆಯ ಜಾಗೃತಿ ಮಾಡಲಿ ಸಮಾಜದಲ್ಲಿ ಈ ಮೂಲಕ ಬದಲಾವಣೆಗಳು ಆಗಲಿ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಮಾತಾನಾಡಿದ್ದಾರೆ.

ಬಿಜೆಪಿಗೆ 150 ಸೀಟು-ಸಚಿವ ಸುನೀಲ್ ಕುಮಾರ್

ನಾವು ಸಮೀಕ್ಷೆಗಳ ಮೇಲೆ ಚುನಾವಣೆ ಎದುರಿಸುವುದಿಲ್ಲ, ಕಾರ್ಯಕರ್ತರು ಅಭಿವೃದ್ಧಿ ನಮ್ಮ ಸಾಧನೆಯ ಮೇಲೆ ಚುನಾವಣೆಗೆ ಹೋಗುತ್ತೇವೆ. ಮಿಷನ್ 150 ಯನ್ನು ಕಣ್ಣ ಮುಂದೆ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಬಿಜೆಪಿಗೆ 150 ಸೀಟು – ಉಳಿದದ್ದೆಲ್ಲ ಬೇರೆಯವರಿಗೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ರು.

ಕಾಂಗ್ರೆಸ್ ಪಕ್ಷವೇ ಶಿವರಾಜ್ ಪಾಟೀಲ್ ಬಾಯಿಂದ ಹೇಳಿಸಿದೆಯಾ?
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಬೋಧಿಸಿದ್ದ ಎಂದು ಚರ್ಚಾಸ್ಪದ ಹೇಳಿಕೆ ನೀಡಿದ್ರು. ಈ ಬಗ್ಗೆ ಮಾತನಾಡೊದ ಸಚಿವ ಸಿನೀಲ್ ಕುಮಾರ್ ಅವರು ಈ ಹೇಳಿಕೆಯನ್ನ ನಾನು ಉಗ್ರವಾದ ಶಬ್ದದಿಂದ ನಾನಿದನ್ನು ಖಂಡಿಸುತ್ತೇನೆ. ಇದು ಪಾಟೀಲ್ ಹೇಳಿಕೆಯ ಕಾಂಗ್ರೆಸ್ನ ನಿಲುವು. ಕಾಂಗ್ರೆಸ್ ಪಕ್ಷ ಇದನ್ನ ಸ್ಪಷ್ಟಪಡಿಸಬೇಕು. ಪಿ ಎಫ್ ಐ ಬ್ಯಾನ್ ನಂತರದ ಈ ಹೇಳಿಕೆ ದೇಶ ಆಲೋಚಿಸುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷವೇ ಶಿವರಾಜ್ ಪಾಟೀಲ್ ಬಾಯಿಂದ ಹೇಳಿಸಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಅರ್ಹರು ಮತ್ತು ಸಾಧಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ
ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ 28 ಸಾವಿರ ಅರ್ಜಿ ಬಂದಿದೆ. ಈ ಬಾರಿ 35 ಕ್ಷೇತ್ರದ 65 ಜನರ ಆಯ್ಕೆ ಆಗಲಿದೆ. ತೆರೆ-ಮರೆಯಲ್ಲಿರುವ ಸಾಧಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸಾಧಕರ ಸಲಹಾ ಸಮಿತಿ ಆಯ್ಕೆ ,ಸಮಿತಿ ಆಯ್ಕೆ ನಡೆಸಲಿದೆ. ಪ್ರಶಸ್ತಿಗೆ ಆಯ್ಕೆ ಮಾಡುವುದು ಬಹಳ ಕ್ಲಿಷ್ಟಕರವಾದ ಕೆಲಸ ಆದರೂ ಅತ್ಯುತ್ತಮ ಆಯ್ಕೆಯನ್ನು ಈ ವರ್ಷ ಕೂಡ ಮಾಡುತ್ತೇವೆ. ಯಾವುದೇ ಒತ್ತಡಕ್ಕೆ ಮಣಿದು ಪ್ರಶಸ್ತಿ ಕೊಡಲ್ಲ. ಅರ್ಹರು ಮತ್ತು ಸಾಧಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುವುದು ಎಲ್ಲಾ ಜಿಲ್ಲೆ, ಎಲ್ಲಾ ಸಮುದಾಯ 35 ಕಲಾ ಪ್ರಾಕಾರಕ್ಕೆ ಪ್ರಶಸ್ತಿ ಇದೆ. ಎಂದು ಉಡುಪಿಯಲ್ಲಿ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿಕೆ

ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಸಚಿವ ಸುನಿಲ್ ಕುಮಾರ್
ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಅರ್ಥಗರ್ಭಿತವಾಗಿ ನಡೆಯಲಿದೆ. ಇದರಿಂದ ಸರ್ಕಾರದ ಅನುದಾನಕ್ಕೆ ಯಾವುದೇ ಕೊರತೆಗಳು ಆಗುವುದಿಲ್ಲ. ಸರ್ಕಾರ, ಪರಿಷತ್ತಿನ ನಡುವೆ ವೈರುಧ್ಯ ಅಭಿಪ್ರಾಯ ಇಲ್ಲ. ದೀಪಾವಳಿ ಮುಗಿದ ಕೂಡಲೇ ಸಮ್ಮೇಳನದ ಪೂರ್ವ ತಯಾರಿ ಸಭೆ ನಡೆಯುತ್ತದೆ. ಸಿಎಂ ಬೊಮ್ಮಾಯಿ 20 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಅನುದಾನದ ಕೊರತೆಯನ್ನು ಮಾಡುವುದಿಲ ಎಂದು ಉಡುಪಿಯಲ್ಲಿ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿಕೆಯನ್ನ ನೀಡಿದ್ದಾರೆ.