ತನ್ನ ಖಾಯಿಲೆಯ ನಡುವೆಯೂ ಇನ್ನೋದು ಜೀವದ ನೋವಿಗೆ ಮಿಡಿದ ಸಮೀಕ್ಷಾ ಎಂ.ವಿ : ಮಾನವೀಯತೆ ಅಂದ್ರೆ ಇದೆ ಅಲ್ವಾ..! – ಕಹಳೆ ನ್ಯೂಸ್
ತಾವು ಕಷ್ಟದಲ್ಲಿದ್ದರೂ ಇನ್ನೊಬ್ಬರ ಕಣ್ಣೀರನ್ನು ಒರೆಸುವ ಪ್ರಯತ್ನದ ಮೂಲಕ ಮಾನವೀಯತೆ ಅನ್ನೋದು ಇನ್ನೂ ಜೀವಂತ ಇದೆ ಅನ್ನೋದನ್ನ ಸಾಬೀತು ಪಡಿಸಿರುವರು ಗುತ್ತಿಗಾರು ವಳಲಂಬೆ ಸುಳ್ಯ ತಾಲೂಕಿನ ಸಮೀಕ್ಷಾ ಎಂ. ವಿ. .
ನಾಗೇಶ್ ಬೆಳ್ಳಾರೆ ಇವರ ನೇತೃತ್ವದಲ್ಲಿ
ಗುತ್ತಿಗಾರು ವಲಲಂಬೆ ಸುಳ್ಯ ತಾಲೂಕಿನ ವಿಶ್ವನಾಥ ಹೇಮವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂ.ವಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು , ಸಮೀಕ್ಷಾ ರವರ ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗಾಗಿ ಸಹಾಯ ಹಸ್ತದ ಮುಖಾಂತರ ಸಹೃದಯಿ ದಾನಿಗಳಿಂದ ನೆರವನ್ನು ಕೋರಿದ್ದು, ಸಹೃದಯಿ ದಾನಿಗಳು ಅದಕ್ಕೆ ಸ್ಪಂದಿಸಿ ಧನ ಸಹಾಯವನ್ನು ಮಾಡಿರುತ್ತಾರೆ.
ದಾನಿಗಳ ಉದಾರ ಮನಸ್ಸಿನ ಕೊಡುಗೆಯಿಂದ ಸಂಗ್ರಹವಾದ ಧನವನ್ನು ಸಮೀಕ್ಷಾ ಹಾಗೂ ಅವರ ಕುಟುಂಬದವರಿಗೆ ನಾಗೇಶ್ ಬೆಳ್ಳಾರೆಯವರು ನೀಡಲು ಹೋದಾಗ ಆ ಕುಟುಂಬ ಇನ್ನೊಂದು ನೋವಿಗೆ ಮಿಡಿದ ರೀತಿಗೆ ಆ ಭಗವಂತನು ಅವರ ನೋವಿಗೆ ಮುಕ್ತಿಯನ್ನು ನೀಡುವುದು ಅಂತು ಖಚಿತ.
ಈ ಇಬ್ಬರು ಮಕ್ಕಳು ಆದಷ್ಟು ಬೇಗ ಗುಣಮುಖರಾಗಿ ತಮ್ಮ ಜೀವನದ ಕನಸುಗಳನ್ನು ನನಸು ಮಾಡಿಕೊಳ್ಳುವಂತಾಗಲಿ ಅನ್ನೋದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ…