Sunday, November 24, 2024
ದಕ್ಷಿಣ ಕನ್ನಡಪುತ್ತೂರು

ಪುತ್ತೂರು ರೈಲ್ವೇ ಹಳಿಯಲ್ಲಿ ರಾಜಾರೋಷವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿ : ಬಂಧಿಸಿ ದಂಡ ವಿಧಿಸಿದ ರೈಲ್ವೇ ಪೊಲೀಸರು -ಕಹಳೆ ನ್ಯೂಸ್

ರೈಲ್ವೇ ಹಳಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯೋರ್ವರನ್ನು ರೈಲ್ವೇ ಪೊಲೀಸರು ಬಂಧಿಸಿ, ದಂಡ ವಿಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪಡ್ಡಾಯೂರು ನಿವಾಸಿ ಕೂಲಿ ಕಾರ್ಮಿಕ ದಿನೇಶ್ ಬಂಧಿತ ವ್ಯಕ್ತಿ. ಈತನನ್ನ ವಶಕ್ಕೆ ಪಡೆದ ಪೊಲೀಸರು ರೈಲ್ವೇ ಸೊತ್ತಿನಲ್ಲಿ ಅಕ್ರಮವಾಗಿ ಪ್ರವೇಶಿಸಿದಲ್ಲದೆ ದುರುಪಯೋಗ ಪಡಿಸಿಕೊಂಡ ಬಗ್ಗೆ ಪ್ರಕರಣ ದಾಖಲಿಸಿ ರೈಲ್ವೇ ಆಕ್ಟ್ ಪ್ರಕಾರ ದಂಡ ವಿಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅ.25ರಂದು ರಾತ್ರಿ ಕೂಲಿ ಕಾರ್ಮಿಕ ದಿನೇಶ್ ಮುರ ರೈಲ್ವೇ ಹಳಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಎಚ್ಚರಿಸಿ ರೈಲ್ವೇ ಹಳಿಯಿಂದ ಬದಿಗೆ ಸರಿಸಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.

ಸಾಮಾಜಿಕ ಕಾರ್ಯಕರ್ತರೊಬ್ಬರು ಘಟನೆಯ ಕುರಿತು ರೈಲ್ವೇ ಸೇವಾ ಕೇಂದ್ರಕ್ಕೆ ಟ್ವೀಟ್ ಮಾಡಿದ್ದರು. ತಕ್ಷಣ ಕಾರ್ಯಪ್ರವೃತರಾದ ರೈಲ್ವೇ ಪೊಲೀಸರು ಮುರಕ್ಕೆ ಬಂದು ವಿಚಾರಣೆ ನಡೆಸಿ ರೈಲ್ವೆ ಹಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಬಂಧಿಸಿದ್ದರು. ರೈಲ್ವೇ ಆಕ್ಟ್ ಪ್ರಕಾರ ದಂಡ ವಿಧಿಸಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.