‘ ಪಪ್ಪು ಪರದಾಟ ‘ Exclusive ಲೋಕಸಭೆಯಲ್ಲಿ ರಾಹುಲ್ ಭೂಕಂಪ! ಬಿದ್ದು ಬಿದ್ದು ನಕ್ಕ ಪ್ರಧಾನಿ ಮೋದಿ – ಕಹಳೆ ನ್ಯೂಸ್
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆಯ ದಿನ. ಟಿಡಿಪಿ ಹಾಗೂ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯಲಿದೆ. ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಅವಿಶ್ವಾಸ ಗೊತ್ತುವಳಿ ಪರೀಕ್ಷೆಗೆ ಸಜ್ಜುಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲಿ ಸೋಲುಣಿಸುವ ಮೂಲಕ ಮುಂದಿನ ವರ್ಷದ ಪ್ರತಿಷ್ಠಿತ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ.
ಮೊದಲಿಗೆ ಅವಿಶ್ವಾಸ ನಿರ್ಣಯದ ಹಕ್ಕು ಮಂಡನೆಯ ಕುರಿತು ಟಿಡಿಪಿ ಹಾಗೂ ಬಿಜೆಪಿಯಿಂದ ತಲಾ ಒಬ್ಬೊಬ್ಬರು ಸಂಸದರು ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದರು. ಟಿಡಿಪಿ ಮೋದಿ ಸರ್ಕಾರ ಆಂಧ್ರದ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ವ್ಯಾಪಕ ಆಕ್ರೋಶ ಪಡಿಸಿತು. ಆ ನಂತರ ಬಿಜೆಪಿಯ ಸಂಸದ ರಾಕೇಶ್ ಸಿಂಗ್ ಬಿಜೆಪಿ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಸಂಸತ್ತಿನ ಮುಂದೆ ಬಿಚ್ಚಿಟ್ಟರು. ತದನಂತರ ಸ್ಪೀಕರ್ ಸುಮಿತ್ರಾ ಮಹಾಜನ್ ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧೀಯವರಿಗೆ ಮಾತನಾಡಲು ಅವಕಾಶ ನೀಡಿದರು.
ರಾಹುಲ್ ಗಾಂಧಿ ಭಾಷಣದ ಆರಂಭದಿಂದಲೂ ಮೋದಿ ಸರ್ಕಾರದ ಮೇಲೆ ಹರಿಹಾಯ್ದರು. ಮೋದಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಪ್ರಯತ್ನಪಟ್ಟರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡರು. ಪ್ರಧಾನಿ ಮೋದಿ ಪದೇ ಪದೇ ‘ಬಾರ್’ ಗೆ ಹೋಗುತ್ತಾರೆ ಎಂದರು! ‘ಬಾಹರ್’ ಎನ್ನುವುದನ್ನು ಬಾರ್ ಎಂದು ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು. ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ಇಡೀ ಸಂಸತ್ತು ಮೇಜು ಕುಟ್ಟಿ ನಗೆಯಾಡಿತು. ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಗುವನ್ನು ತಡೆದುಕೊಳ್ಳಲಾರದೆ ಜೋರಾಗಿ ನಗಲಾರಂಭಿಸಿದರು. ಭಾರೀ ಅಪಹಾಸ್ಯಕ್ಕೀಡಾದ ರಾಹುಲ್ ಗಾಂಧಿ ‘ಬಾಹರ್’ ಎನ್ನುವುದನ್ನು ಪುನಃ ಎರಡು ಬಾರಿ ಉಚ್ಚರಿಸಿದರು. ಮೋದಿ ಪದೇ ಪದೇ ‘Abroad(ವಿದೇಶ)’ ಗೆ ಹೋಗುತ್ತಾರೆ ಎಂದು ಇಂಗ್ಲಿಷ್ನಲ್ಲಿ ಹೇಳಿದರು. ಒಟ್ಟಾರೆ ಪ್ರಧಾನಮಂತ್ರಿಯವರನ್ನು ಟೀಕಿಸಲು ಹೋಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರೀ ಅಪಹಾಸ್ಯಕ್ಕೆ ಈಡಾದಂತಹ ಘಟನೆ ಇಂದು ಅವಿಶ್ವಾಸ ನಿರ್ಣಯ ಮಂಡನೆಯ ಕುರಿತಾದ ಚರ್ಚೆಯ ವೇಳೆ ಲೋಕಸಭೆಯಲ್ಲಿ ನಡೆಯಿತು.
ರಾಜಕೀಯ ಪಕ್ಷಗಳ ಹೈಡ್ರಾಮ!
ಕಳೆದ ಯುಪಿಎ ಸರ್ಕಾರ ಮತ್ತು ಈಗಿನ ಎನ್‌ಡಿಎ ನ ಎರಡೂ ಸರ್ಕಾರಗಳು ಒರಿಸ್ಸಾದ ಅಭಿವೃದ್ಧಿಗೆ ಏನನ್ನೂ ನೀಡಿಲ್ಲ. ಇಂದು ನಡೆಯಲಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಿಂದ ನಮ್ಮ ರಾಜ್ಯಕ್ಕೆ ಏನೂ ಲಾಭ ಇಲ್ಲ ಎಂದು ಸದನದಿಂದ ಹೊರನಡೆದರು. ಇನ್ನು ಅವಿಶ್ವಾಸ ನಿರ್ಣಯ ಮಂಡಿಸಲು ಟಿಡಿಪಿ ಸಂಸದ ಜಯದೇವ್ ಗಲ್ಲಾ ಅವರಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವಕಾಶ ನೀಡಿದರು. ಟಿಡಿಪಿ ಸಂಸದ ಜಯದೇವ್ ಆಂಧ್ರಪ್ರದೇಶಕ್ಕೆ ಆಗಿರುವಂತಹ ಅನ್ಯಾಯಗಳ ಪಟ್ಟಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಇದೇ ವೇಳೆ ಹಿಂದಿನ ಸರ್ಕಾರ ಆಂಧ್ರಪ್ರದೇಶವನ್ನು ಒಡೆದ ರೀತಿಯನ್ನು ಕಟುವಾಗಿ ಟೀಕಿಸಿದರು. ಟಿಡಿಪಿ ಸಂಸದರ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಟಿ ಆರ್ ಎಸ್ ಸಂಸದರು ವಾಗ್ವಾದಕ್ಕಿಳಿದರು. ಕೆಲ ಹೊತ್ತು ಟಿಡಿಪಿ ಮತ್ತು ಟಿಆರ್ಎಸ್ ಸಂಸದರ ನಡುವಿನ ವಾಗ್ವಾದಕ್ಕೆ ಸದನ ಸಾಕ್ಷಿಯಾಯಿತು. ತಕ್ಷಣ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಎರಡೂ ರಾಜ್ಯಗಳ ಸಂಸದರನ್ನು ಸಮಾಧಾನಪಡಿಸಿದರು.
ಇನ್ನು ಬಿಜು ಜನತಾ ದಳದಂತೆ ಶಿವಸೇನಾ ಕೂಡ ಇಂದಿನ ಅತ್ಯಂತ ಮಹತ್ವದ ಅಧಿವೇಶನದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಕೊನೆಯ ಕ್ಷಣದಲ್ಲಿ ನಡೆದ ಶಿವಸೇನಾ ಸಂಸದರ ಸಭೆಯಲ್ಲಿ ಈ ತೀರ್ಮಾನ ಹೊರ ಬಿದ್ದಿದ್ದು, ಯಾವುದೇ ಸಂಸದರು ಸಭೆಯಲ್ಲಿ ಪಾಲ್ಗೊಂಡಿಲ್ಲ. ನಿನ್ನೆಯಷ್ಟೇ ಎನ್.ಡಿ.ಎ ಪರವಾಗಿ ಮತ ಚಲಾಯಿಸುವುದಾಗಿ ಹೇಳಿದ್ದಂತಹ ಶಿವಸೇನಾ ಕೊನೆ ಕ್ಷಣದಲ್ಲಿ ಯಾರ ಪರವೂ ಮತ ಚಲಾಯಿಸದೆ ಸಂಸತ್ತಿನಿಂದ ಹೊರಗಿರಲು ತೀರ್ಮಾನಿಸಿದೆ. ಈ ಬೆಳವಣಿಗೆಯಿಂದಾಗಿ ಲೋಕಸಭೆಯ ಒಟ್ಟು ಸಾಮರ್ಥ್ಯ 515 ಕ್ಕಿಳಿದಿದ್ದು ಹಾಗೂ ಮ್ಯಾಜಿಕ್ ನಂಬರ್ 258 ಕ್ಕೆ ಕುಸಿದಂತಾಗಿದೆ.