Friday, November 22, 2024
ದಕ್ಷಿಣ ಕನ್ನಡ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗುರು ನಗರ, ಪಡು ಸತ್ತಿಕಲ್ಲು ಇದರ ಮಂದಿರ ಜೀರ್ಣೋದ್ಧಾರ : ಶಾಸಕ ಡಾ.ಭರತ್ ಶೆಟ್ಟಿಯವರಿಂದ ವಿಜ್ಞಾಪನಾ ಪತ್ರ ಬಿಡುಗಡೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗುರು ನಗರ, ಪಡು ಸತ್ತಿಕಲ್ಲು ಇದರ ಮಂದಿರ ಜೀರ್ಣೋದ್ಧಾರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ವಿಜ್ಞಾಪನಾ ಪತ್ರವನ್ನು ಭಾನುವಾರ ಬಿಡುಗಡೆಗೊಳಿಸಿದರು.

ಸತ್ತಿಕಲ್ ಗುರು ಮಂದಿರದ ಸನ್ನಿಧಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷರಾದ ಯೋಗೀಶ್ ಸತಿಕಲ್ಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ್ ಕೋಟ್ಯಾನ್, ಪ್ರಧಾನ ಸಂಚಾಲಕರಾದ ನಾಗೇಶ್ ಕಾಪೆಟ್ಟು, ವಾಸ್ತು ತಜ್ಞರಾದ ಈಶ್ವರ ಕಲಾಯಿ, ಗೆಜ್ಜೆಗಿರಿಯ ಆಡಳಿತ ಸಮಿತಿ ಸದಸ್ಯರಾದ ರವಿ ಪೂಜಾರಿ ಚಿಲಂಬಿ, ರಾಜೇಂದ್ರ ಚಿಲಿಂಬಿ, ಪಂಚಾಯತ್ ಸದಸ್ಯರಾದ ಯಶೋದ ಜೆ ಸಾಲ್ಯಾನ್, ಹರೀಶ್ ಹೊಸಮನೆ, ಮೀನಾಕ್ಷಿ ಬಿರ್ಣಮಾಜಲ್, ಸುರೇಖಾ ಚೆನ್ನಪ್ಪ ಅಮೀನ್ ಹಾಗೂ ಗೌರವ ಅಧ್ಯಕ್ಷರಾದ ನಾರಾಯಣ ಮಾಸ್ತರ್ ಸತ್ತಿಕಲ್, ಜಯರಾಮ ಸತ್ತಿಕಲ್, ಜಗನ್ನಾಥ ಸನಿಲ್ ಕೊನಿಮಾರ್, ಹಾಗೂ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.