ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಡಾ.ಪ್ರಭಾಕರ ಶಿಶಿಲರ ವಿಶಿಷ್ಟ ಕಾದಂಬರಿ ಚದಗ್ನಿ ಲೋಕಾರ್ಪಣೆ –ಕಹಳೆ ನ್ಯೂಸ್
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯ ದ ಎಸ್ ಎಸ್ ಪಿಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಡಾ.ಪ್ರಭಾಕರ ಶಿಶಿಲರ ವಿಶಿಷ್ಟ ಕಾದಂಬರಿ ಚದಗ್ನಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕನ್ನಡದ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಡಾ.ಪ್ರಭಾಕರ ಶಿಶಿಲರ ಕಾದಂಬರಿ ಚಿದಗ್ನಿಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತಾನಾಡಿದ ಇವರು ಕೃತಿಗಳ ಮೂಲಕ ಆಧ್ಯಾತ್ಮಿಕ ಪ್ರತಿಭೆಯನ್ನು ಬೆಳಗಿಸುವುದು ಶ್ರೇಷ್ಠ ಕಾರ್ಯ. ಪುಸ್ತಕಗಳನ್ನು ಓದುವುದು ಜ್ಞಾನ ಮತ್ತು ಮಾನಸಿಕ ಸಂತಸಕ್ಕೆ ಪೂರಕ. ವಿದ್ಯಾರ್ಥಿಗಳ ಹವ್ಯಾಸ ವೃದ್ದಿಯಾಗುತ್ತದೆ ಎಂದ್ರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮಾತಾನಾಡಿ ವೈಚಾರಿಕ ಬದುಕಿನಿಂದ ಜೀವನ ಪಾವನ. ಯುವ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನದ ಅಭ್ಯುದಯಕ್ಕೆ ಸಾಹಿತ್ಯ ಪ್ರಧಾನ. ಸಾಹಿತ್ಯದ ನೀತಿ ಸಂಪನ್ನತೆಯ ಜ್ಞಾನವನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದ್ರು. ಲೋಕಾರ್ಪಣೆ ಬಳಿಕ ಸಾಹಿತಿ, ಬರಹಗಾರ ಹಾಗೂ ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಶಿಶಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಸಾಹಿತಿ ಡಾ.ಪ್ರಭಾಕರ ಶಿಶಿಲ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ಅಧ್ಯಕ್ಷ ದೀಪಕ್ ನಂಬಿಯಾರ್, ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ರವಿ ಕಕ್ಕೆಪದವು, ಉಪನ್ಯಾಸಕಿಯರಾದ ಜಯಶ್ರೀ. ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.