Recent Posts

Sunday, January 19, 2025
ಸುದ್ದಿ

ಪುತ್ತೂರು: ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ; ಪ್ರಕರಣದ ನಂತರ ದುಬೈಗೆ ತೆರಳಿದ್ದ ಪೋಳ್ಯ ನಿವಾಸಿ ಇರ್ಷಾದ್- ಕಹಳೆ ನ್ಯೂಸ್

ಪುತ್ತೂರು : ಕೊಲೆಯತ್ನ ಪ್ರಕರಣದ 2ನೇ ಆರೋಪಿಯಾಗಿರುವ ಪೋಳ್ಯ ನಿವಾಸಿ ಇರ್ಷಾದ್ ಇವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ 47/2019 ಕಲಂ: 143,147,148,341,504,323,324,326,307 ಜೊತೆಗೆ 149ಐಪಿಸಿ ಪ್ರಕರಣದಲ್ಲಿ ಎ.2ಆರೋಪಿಯಾಗಿದ್ದ ಪೋಳ್ಯ ನಿವಾಸಿ ಇರ್ಷಾದ್ ಇವರು ಪ್ರಕರಣದ ನಂತರ ದುಬೈಗೆ ತೆರಳಿ ತಲೆಮರೆಸಿಕೊಡಿದ್ದನು. ಇದೀಗ ದುಬೈಯಿಂದ ಮರಳಿಬಂದ ವೇಳೆ ಮಂಗಳೂರು ಬಜಪೆ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಾರೆಂಟಿನಲ್ಲಿ ದಸ್ತಗಿರಿಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ಆರೋಪಿಗೆ ನವೆಂಬರ್10ರ ತನಕ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು