Recent Posts

Sunday, January 19, 2025
ಸುದ್ದಿ

ರಾಹುಲ್​ ಕಣ್ಸನ್ನೆ ಕಂಡು ಪ್ರಿಯಾ ವಾರಿಯರ್​ ಏನಂದ್ರು ಗೊತ್ತಾ? – ಕಹಳೆ ನ್ಯೂಸ್

ನವದೆಹಲಿ: ಒಂದೇ ಒಂದು ಕಣ್ಸನ್ನೆಯಿಂದ ರಾತ್ರೋರಾತ್ರಿ ಖ್ಯಾತಿಗಳಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕಣ್ಸನ್ನೆಗೆ ಫಿದಾ ಆಗಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಭಾಷಣದ ಕೊನೆಯಲ್ಲಿ ಪ್ರಧಾನಿ ಬಳಿಗೆ ತೆರಳಿ ಅಪ್ಪಿಕೊಂಡರು. ನಂತರ ತಮ್ಮ ಸ್ಥಾನದಲ್ಲಿ ಕುಳಿತು ಕಣ್ಸನ್ನೆ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಹುಲ್​ ಗಾಂಧಿ ಕಲಾಪದೊಳಗೆ ಕಣ್ಣೊಡೆದದ್ದು ಯಾರಿಗೆ, ಏಕೆ ಕಣ್ಣೊಡೆದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗಿದ್ದಲ್ಲದೆ, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್​ ಜತೆಗೆ ರಾಹುಲ್​ನನ್ನು ಹೋಲಿಸಿ ಟ್ರೋಲ್​ ಮಾಡಲಾಗುತ್ತಿದೆ. ಇದರ ಬೆನ್ನಲ್ಲೆ ಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನ ಸಿಗ್ನೇಚರ್ ಸ್ಟೈಲ್
ರಾಹುಲ್​​ ಕಣ್ಸನ್ನೆ ಕುರಿತು ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾ, ಕಾಲೇಜಿನಿಂದ ಬಂದ ತಕ್ಷಣ ಈ ಸುದ್ದಿ ನೋಡಿ ಖುಷಿಯಾಯಿತು. ನನ್ನ ಒರು ಅದಾರ್​ ಲವ್​ ಚಿತ್ರದ ಸಿಗ್ನೇಚರ್ ಸ್ಟೈಲ್ ಅನ್ನು ರಾಹುಲ್ ಅವರು ಉತ್ತಮವಾಗಿ ಕಾಪಿ ಮಾಡಿದ್ದು, ನನಗಿಂತ ಚೆನ್ನಾಗಿ ಕಣ್ಸನ್ನೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷ ಮತ್ತು ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಗ್ವಿಜಯ ಸಾಧಿಸಿದೆ.