Sunday, January 26, 2025
ಸುದ್ದಿ

ಪುತ್ತೂರು ಪಡೀಲ್ ಟ್ರಿನಿಟಿ ಹಾಲ್‌ನ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ ನಿಧನ –ಕಹಳೆ ನ್ಯೂಸ್

ಪುತ್ತೂರು: ಪಡೀಲ್‌ನಲ್ಲಿರುವ ಎಮ್‌ಡಿಎಸ್ ಟ್ರಿನಿಟಿ ಹಾಲ್ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ(93)ರವರು ಇಂದು ನಿಧನರಾಗಿದ್ದಾರೆ. ಪಡೀಲ್ ಎಮ್‌ಡಿಎಸ್ ದಿ.ಬೆಂಜಮನ್ ಡಿಸೋಜ ಅವರ ಪತ್ನಿಯಾಗಿದ್ದ ಆ್ಯಲಿಸ್ ಡಿಸೋಜರವರು ಪಡೀಲ್ ಟ್ರಿನಿಟಿ ಹಾಲ್‌ನ ಮಾಲಕಿಯಾಗಿದ್ದರು.
ಆ್ಯಲಿಸ್ ಡಿಸೋಜ ಅವರ ಮೃತದೇಹವನ್ನ ನಾಳೆ ಬನ್ನೂರಿನ ಚರ್ಚ್ಗೆ ಮೆರವಣಿಗೆ ಮೂಲಕ ಸಾಗಿ ಬಳಿಕ ಬೆಳ್ಳಗ್ಗೆ 11: 30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.
ಮೃತರು ಪುತ್ರರಾದ ಪೀಟರ್ ಡಿಸೋಜ, ಹೆನ್ರಿ ಡಿಸೋಜ, ಲ್ಯಾನ್ಸಿ ಡಿಸೋಜ ಪುತ್ರಿಯರಾದ ಸಿಸಿಲಿಯಾ, ಸೆನಿಲ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು