Saturday, January 25, 2025
ಸುದ್ದಿ

ಶ್ರೀಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಕಾಂತಾರ ಚಿತ್ರದ ನಟ ರಿಷಭ್ ಶೆಟ್ಟಿ ದಂಪತಿಗಳು ಹಾಗೂ ಚಿತ್ರತಂಡ ಭೇಟಿ – ಕಹಳೆ ನ್ಯೂಸ್

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಕಾಂತಾರ ಚಿತ್ರದ ನಾಯಕ ನಟ ರಿಷಭ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕಾಂತಾರ ಚಿತ್ರ ತಂಡದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ಸಿನೆಮಾ ರಾಜ್ಯ ರಾಷ್ಟ್ರ ಮಟ್ಟದಲ್ಲಿ ದಾಖಲೆ ಹುಟ್ಟಿಸಿದ್ದು, ಕಾಂತಾರ ಸಿನೆಮಾ ತೆರೆ ಕಾಣುವ ಮುಂಚೆ ಒಂದು ಬಾರಿ ಭೇಟಿ ನೀಡಿ ಚಿತ್ರದ ಯಶಸ್ವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದು ಕ್ಷೇತ್ರಕ್ಕೆ ಇವರ ಎರಡನೇಯ ಭೇಟಿಯಾಗಿದ್ದು, ಶ್ರೀ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ದಂಪತಿಗಳನ್ನು ಆತ್ಮೀಯವಾಗಿ ಗೌರವಿಸಿ ಅಭಿನಂದಿಸಿದರು. ಜೊತೆಗೆ ಚಿತ್ರ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರರಾದ ಡೊಂಬಯ್ಯ ಗೌಡ, ಅಧ್ಯಕ್ಷರಾದ ವಸಂತ ಗೌಡ ಇನ್ನು ಅನೇಕರು ಉಪಸ್ಧಿತರಿದ್ರು.