ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇದರ ವಿಕ್ರಂ ಸಾರಾಭಾಯಿ ಎಂಬ ಹೆಸರಿನ ನೂತನ ವಿಜ್ಞಾನ ಪ್ರಯೋಗಾಲಯವನ್ನು ಮುಂಬೈನ ನಿದರ್ಶನ್ ಗೋವಾನಿ, ಡೈರೆಕ್ಟರ್ ಆಫ್ ಪ್ರಾಪರ್ಟಿ ಮ್ಯಾನೇಜ್ಮೆಂಟ್‌ನ ಟ್ರಸ್ಟಿ ಹಾಗೂ ಕಮಲ ಅಂಕಿ ಬಾಯಿ ಗೋಮಂದಿರ ಗೋವಾನಿ ಟ್ರಸ್ಟ್ ಇವರು ಸ್ವಯಂಚಾಲಿತ ಪರದೆ ಸರಿಸುವ ಬಟನ್ ಒತ್ತುವುದರ ಮೂಲಕ ಉದ್ಘಾಟಿಸಿದರು.
ಶ್ರೀಮತಿ ಶಕುಂತಲಾ ಅಯ್ಯರ್ ಸುಭಿಕ್ಷ ಫಾರ್ಮರ್ಸ್ ಸೊಸೈಟಿ ಉಚ್ಚ ನ್ಯಾಯಾಲಯ ಇದರ ಸಿ.ಇ.ಓ ಇವರು ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಶ್ರೀ ರಮೇಶ್ ಗೋವಾನಿ ಮಾಲಕರು ಕಮಲ ಗ್ರೂಪ್ ಮುಂಬೈ ಶ್ರೀ ವಿವೇಕ ಮಿತ್ತಲ್ ರಿಯಲ್ ಎಸ್ಟೇಟ್ ಉದ್ಯಮಿ ಮುಂಬೈ, ಶ್ರೀ ಪವನ್ ಚಂದ್ರ ಶೆಟ್ಟಿ ವಕೀಲರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಶ್ರೀ ವಿಶಾಲ ಸಾಲಿಯಾನ್ ಅಧ್ಯಕ್ಷರು ಸಣ್ಣ ಕೈಗಾರಿಕಾ ಉದ್ಯಮಿ ದಕ್ಷಿಣ ಕನ್ನಡ ಹಾಗೂ ಶ್ರೀ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು, ವಿದ್ಯಾಕೇಂದ್ರದ ಸಂಚಾಲಕರು ಶ್ರೀ ವಸಂತ ಮಾಧವ, ಸಹ ಸಂಚಾಲಕರು ಶ್ರೀ ರಮೇಶ್ ಎನ್, ಶೈಕ್ಷಣಿಕ ಪರಿವೀಕ್ಷಕರು ಶ್ರೀಮತಿ ಲಕ್ಷಿ÷್ಮ ರಘುರಾಜ್, ಪ್ರೌಢಶಾಲಾ ಆಡಳಿತ ಅಧಿಕಾರಿ ಶ್ರೀಮತಿ ಶಾಂಭವಿ, ಮುಖ್ಯೋಪಾಧ್ಯಾಯರು ಶ್ರೀ ಗೋಪಾಲ ಎಂ, ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತಾವೇ ತಯಾರಿಸಿದ ವೈಜ್ಞಾನಿಕ ಮಾದರಿಗಳ ಬಗ್ಗೆ ವಿವರಣೆ ನೀಡುವುದರ ಮೂಲಕ ಅತಿಥಿಗಳ ಮೆಚ್ಚುಗೆಯನ್ನು ಪಡೆದರು. ಅಂತಿಮವಾಗಿ ರಿಮೋಟ್ ಮೂಲಕ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಪಟಾಕಿ ರಾಕೆಟ್‌ನ್ನು ಅತಿಥಿಗಳು ಉಡಾಯಿಸಿದರು.