Thursday, January 23, 2025
ದಕ್ಷಿಣ ಕನ್ನಡ

ನೀವು ಎಕ್ಕೂರು ಚರ್ಚ್‌ಗೆ ಬನ್ನಿ.. ಬೈಬಲ್ ಓದಿ : ಕ್ರಿಶ್ಚಿಯನ್ ಹೆಂಗಸರಿಂದ ಕಾವೂರಿನ ಹಿಂದೂ ಕುಟುಂಬದ ಮತಾಂತರಕ್ಕೆ ಯತ್ನ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೂರಿನಲ್ಲಿ ಹಿಂದೂ ಕುಟುಂಬವೊಂದನ್ನ ಕ್ರಿಶ್ಚನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಕಾವೂರಿನ ಕುಟುಂಬವೊಂದು ಕೆಲ ತಿಂಗಳ ಹಿಂದೆ ಮನೆ ಮಗುವನ್ನ ಕಳೆದುಕೊಂಡು ನೋವಿನಲ್ಲಿತ್ತು. ಇದೇ ಸಂದರ್ಭದಲ್ಲಿ ಈ ಕುಟುಂಬವನ್ನ ಮತಾಂತರ ಮಾಡಲು ಯತ್ನಿಸಲಾಗಿದೆ. ಒಂಟಿ ಹಿಂದೂ ಮಹಿಳೆ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಇಬ್ಬರು ಕ್ರಿಶ್ಚಿಯನ್ ಹೆಂಗಸರು, ನೀವು ಎಕ್ಕೂರು ಚರ್ಚ್ಗೆ ಬನ್ನಿ.. ಬೈಬಲ್ ಓದಿ.. ನಿಮಗೆ ಒಳ್ಳೆದಾಗುತ್ತದೆ ಎಂದು ಹೇಳಿದ್ದಾರೆ.

ಮೂರು ನಾಲ್ಕು ಬಾರಿ ಕ್ರಿಶ್ಚನ್ ಹೆಂಗಸರಿಬ್ಬರು ಹಿಂದೂಗಳ ಮನಗೆ ಬಂದಿದ್ದಾರೆ. ಈ ವಿಚಾರವನ್ನ ಹಿಂದೂ ಮನೆಯವರು ಅಕ್ಕಪಕ್ಕದವರಿಗೆ ತಿಳಿಸಿ, ಬಳಿಕ ಹಿಂದೂ ಸಂಘಟನೆಗೆ ಕರೆ ಮಾಡಿ ನಡೆದ ವಿಚಾರವನ್ನ ತಿಳಿಸಿದ್ದಾರೆ. ಹಿಂದೂ ಸಂಘಟನೆಯವರು ಕಾವೂರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆಗೆ ಇಬ್ಬರು ಹೆಂಗಸರನ್ನು ಕರೆದು ವಿಚಾರಿಸಿದಾಗ ಅವರ ಬ್ಯಾಗ್‌ನಲ್ಲಿ ಬೈಬಲ್ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕೆಲ ದಾಖಲೆಗಳು ಲಭ್ಯವಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.