Monday, November 25, 2024
ಸುದ್ದಿ

ಪುತ್ತೂರು ಬೈಪಾಸ್ ರಸ್ತೆಯ ಅಶ್ಮಿ ಕಂಫಟ್೯ ತ್ಯಾಜ್ಯ ನೀರಿನಿಂದ ಅಕ್ಕ ಪಕ್ಕ ಗಬ್ಬು ವಾಸನೆ : ಸ್ವಚ್ಚತೆ ಕಾಪಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ನಗರಸಭೆಯಿಂದ ಖಡಕ್ ವಾರ್ನಿಂಗ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು : ಪುತ್ತೂರಿನ ಬೈಪಾಸ್ ರಸ್ತೆಯ ಬಪ್ಪಳಿಗೆ ಸಮೀಪದ ಅಶ್ಮಿ ಕಂಫರ್ಟ್ (ಹೋಟೆಲ್, ಬಾರ್, ಲಾಡ್ಜ್) ಇದರ ಕೊಳಚೆ ತ್ಯಾಜ್ಯ ನೀರನ್ನು ಮಳೆ ನೀರಿನ ಚರಂಡಿಗೆ ಬಿಡುತ್ತಿದ್ದು ಇದರಿಂದಾಗಿ ಸ್ಥಳೀಯ ನಿವಾಸಿ
ಗಳು ಮೂಗು ಮುಚ್ಚುವಂತಾಗಿತ್ತು. ಕಳೆದ 3ವರ್ಷಗಳಿಂದ ಈ ಸಮಸ್ಯೆಯಿದ್ದು, ಸ್ಥಳೀಯ ಬಂಗಾರ್ ಕಾಯರ್ ಕಟ್ಟೆ ನಿವಾಸಿಗಳು ಶಾಶ್ವತ ಪರಿಹಾರ ಒದಗಿಸುವಂತೆ ನಗರಸಭೆಗೆ
ದೂರನ್ನು ನೀಡಿದ್ದರು. .

ದೂರಿನ ಮೇರೆಗೆ ನಗರಸಭೆಯಿಂದ ಹೋಟೆಲ್ ಮಾಲಿಕರಿಗೆ ನೋಟಿಸ್ ನೀಡಿ, 15ದಿನಗಳ ಒಳಗಾಗಿ ಮಳೆನೀರಿನ ಚರಂಡಿಗೆ ಬಿಡುತ್ತಿದ್ದ ತ್ಯಾಜ್ಯ ನೀರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ತಿಳಿಸಿತ್ತು. ಆದರೆ ಈ ಬಗ್ಗೆ ಯಾವುದೇ ರೀತಿಯಲ್ಲೂ ಅಶ್ಮಿ ಕಂಫರ್ಟ್ ವಾಣಿಜ್ಯ ಸಂಕೀರ್ಣ ದವರು ಕ್ರಮ ಕೈಗೊಳ್ಳದೆ, ಇಲ್ಲಿನ ಸ್ಥಳೀಯ ಪರಿಸರವಿಡೀ ಗಬ್ಬು ವಾಸನೆ ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿತ್ತು. ಇದನ್ನ ಅರಿತ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸದಸ್ಯ ಅಶೋಕ್ ಶೆಣೈ ತಕ್ಷಣ ಸ್ಪಂದಿಸಿ ಹೆಲ್ತ್ ಇನ್ಸ್ಪೆಕ್ಟರ್ ವರಲಕ್ಷ್ಮಿ ಮತ್ತು ನಗರಸಭೆಯ ಪುರುಷೋತ್ತಮ್ ಸೇರಿದಂತೆ ಪುತ್ತೂರು ಪೊಲೀಸ್ ಠಾಣಾ ಎ.ಎಸ್.ಐ ಲೋಕನಾಥ್ ಮತ್ತು ಉದಯ ಇವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಳೆನೀರಿನ ಚರಂಡಿಗೆ ಬಿಡುತ್ತಿದ್ದ ತ್ಯಾಜ್ಯ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಾನೂನು ಪ್ರಕಾರ STP ( sewerage treatment plant) ಮಾಡಲು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಯಾವುದೇ ಕಾರಣಕ್ಕೂ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಮಾಡುವ ಕೊಳಚೆ ನೀರನ್ನು ನಗರಸಭೆಯ ಚರಂಡಿಗೆ ಬಿಡಲು ಆಸ್ಪದ ನೀಡಬಾರದೆಂದು ನಗರಸಭೆಗೆ ದೂರು‌ ನೀಡಿದ್ದಾರೆ.