Thursday, January 23, 2025
ಸುದ್ದಿ

ಪಂಜುರ್ಲಿ ದೈವದ ಮುಖವರ್ಣಿಕೆ ಪ್ರಕರಣ : ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಸಲ್ಲಿಸಿ, ಕ್ಷಮೆಯಾಚಿಸಿದ ಆಂಧ್ರದ ಯುವತಿ – ಕಹಳೆ ನ್ಯೂಸ್

ಬೆಳ್ತಂಗಡಿ: “ಕಾಂತಾರ’ ಚಲನಚಿತ್ರದಲ್ಲಿರುವ ದೈವದ ಪಾತ್ರದಂತೆ ಮುಖವರ್ಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿ, ಡಾ| ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮಾಪಣೆ ಕೇಳಿ ಆಶೀರ್ವಾದ ಪಡೆದ ಘಟನೆ ನ. 3ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ವೇತಾ, ಇದನ್ನು ತಿಳಿದು ಮಾಡಿರಲಿಲ್ಲ, ಯಕ್ಷಗಾನ ಪಾತ್ರ ಮತ್ತು ಇದು ಒಂದೇ ಎಂದುಕೊಂಡಿದ್ದೆ. ಟೀಕೆಗಳು ಬಂದ ಬಳಿಕ ಬೇರೆ ಬೇರೆ ಎಂದು ತಿಳಿಯಿತು. ಸಮಸ್ತ ದೈವಾ ರಾಧಕರಲ್ಲಿ ಹಾಗೂ ಜನತೆಯಲ್ಲಿ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಳ್ಳುವುದಾಗಿ ತಿಳಿಸಿದರು.