Wednesday, January 22, 2025
ಸುದ್ದಿ

ಕಲ್ಲಡ್ಕ : ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಆಗತ- ಸ್ವಾಗತ ಕಾರ್ಯಕ್ರಮ ಪ್ರವೇಶೋತ್ಸವ- 2022 – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಆಗತ- ಸ್ವಾಗತ ಪ್ರವೇಶೋತ್ಸವ- 2022 ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪ ಪ್ರಜ್ವಲನ ಹಾಗೂ ಸರಸ್ವತಿ ವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಹೊಸ ವಿದ್ಯಾರ್ಥಿಗಳು ಹಾಗೂ ಹೊಸ ಉಪನ್ಯಾಸಕರು ಅಗ್ನಿಹೋತ್ರಕ್ಕೆ ಆಹುತಿಯನ್ನು ನೀಡಿದರು.

ಮಾತೆಯರು ಆರತಿ ಬೆಳಗಿದರು. ನಂತರ ತಿಲಕಧಾರಣೆ ಮಾಡಿಸಿಕೊಂಡು ಅತಿಥಿಗಳ ಆಶೀರ್ವಾದ ಪಡೆದರು. ಬಳಿಕ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಗ್ನಿಹೋತ್ರದ ಮಹತ್ವವನ್ನು ತಿಳಿಸುವುದರ ಜೊತೆಗೆ ವಿದ್ಯಾದೇವತೆಯಾದ ಸರಸ್ವತಿಯ ವಂದನೆಯೊಂದಿಗೆ ಅಧ್ಯಯನ ಮಾಡುವುದರಿಂದ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಲು ಸಾಧ್ಯ ಎಂದು ಹೇಳಿದರು.

ಹಾಗೂ ಜೀವನ ಶಿಕ್ಷಣದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಮಲಾ ಗ್ರೂಪ್‍ನ ಮುಖ್ಯಸ್ಥರಾದ ಶ್ರೀ ರಮೇಶ್ ಗುವಾನಿ ಹಾಗೂ ಶ್ರೀಮತಿ ನಿದರ್ಶನ ಗುವಾನಿ (director of property management trustee ) ಶ್ರೀ ವಿವೇಕ್ ಮಿತ್ತಲ್ (ಉದ್ಯಮಿಗಳು ಮುಂಬೈ), ಪವನ್ ಚಂದ್ರ ಶೆಟ್ಟಿ (ವಕೀಲರು, ಕರ್ನಾಟಕ ಉಚ್ಛ ನ್ಯಾಯಾಲಯ), ಶ್ರೀಮತಿ ಶಕುಂತಲಾ ಅಯ್ಯರ್ (CEO ಸುಭಿಕ್ಷಾ Farmers society, Bangalore ), ಶ್ರೀ ವಿಶಾಲ್ ಸಾಲ್ಯಾನ್, ಗುಡಿ ಕೈಗಾರಿಕಾ ಉದ್ಯಮಿ (ದಕ್ಷಿಣ ಕನ್ನಡ), ವಿದ್ವಾನ್ ಶ್ರೀಧರ ಹೊಳ್ಳ ಹಾಗೂ ಶ್ರೀಮತಿ ಪ್ರತಿಮಾ ಶ್ರೀಧರ ಹೊಳ್ಳ (ಭರತನಾಟ್ಯ ಕಲಾವಿದರು, ಮಂಗಳೂರು) ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆಯಾದ ಶ್ರೀಮತಿ ಡಾ. ಕಮಲಾ ಪ್ರಭಾಕರ ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಕು. ನವಿತಾ ಕಾರ್ಯಕ್ರಮ ನಿರೂಪಿಸಿ, ಕು. ಅರ್ಪಿತಾ ಸ್ವಾಗತಿಸಿ, ಕು. ಅಂಕಿತಾ ವಂದಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.