Wednesday, January 22, 2025
ಸುದ್ದಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಉಪ್ಪಿನಂಗಡಿ ಘಟಕ ಇದರ 25 ಬೆಳ್ಳಿಹಬ್ಬದ ಸಂಭ್ರಮ : ನಾಳೆ ನಡೆಯಲಿದೆ ಬೆಳ್ಳಿ ಬೆಳಕಿನ ಚಿತ್ತಾರ ತುಳಸಿ ಹಬ್ಬದ ಆಚರಣೆ ಹಾಗೂ ಬಿರುವೆರ್ ಪೆರ್ನೆ ಬಿಳಿಯೂರು ಸಂಘಟನೆಯ ಉದ್ಘಾಟನಾ ಸಮಾರಂಭ -ಕಹಳೆ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಉಪ್ಪಿನಂಗಡಿ ಘಟಕ ಇದರ 25 ಬೆಳ್ಳಿಹಬ್ಬದ ಸಂಭ್ರಮದಲ್ಲಿ ಬೆಳ್ಳಿ ಬೆಳಕಿನ ಚಿತ್ತಾರ ತುಳಸಿ ಹಬ್ಬದ ಆಚರಣೆ ಹಾಗೂ ಬಿರುವೆರ್ ಪೆರ್ನೆ ಬಿಳಿಯೂರು ಸಂಘಟನೆಯ ಉದ್ಘಾಟನಾ ಸಮಾರಂಭ 05-11-2022ನೇ ಶನಿವಾರ ಸಂಜೆ 6.00ಕ್ಕೆ ನಡೆಯಲಿದೆ. ಪೆರ್ನೆಯ ರವೀಂದ್ರ ಪೂಜಾರಿ ಮೇಗಿನಪುರಿಯ ಇವರ “ಸಮೃದ್ಧಿ ನಿಲಯ”ದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಪೂಜಾರಿ ಹತ್ತು ಕಲಸೆ ಇವರು ಅಧ್ಯಕ್ಷತೆವಹಿಸಲಿದ್ದಾರೆ. ಯುವವಾಹಿನಿ (ರಿ,) ಕೇಂದ್ರ ಸಮಿತಿ ಮಂಗಳೂರು ಇದರ ನಿಕಟ ಪೂರ್ವ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಬಿರುವೆರ್ ಪೆರ್ನೆ ಬಿಳಿಯೂರು ಸಂಘಟನೆಯ ಉದ್ಘಾಟನೆಯನ್ನ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ಇಲ್ಲಿನ ಕೋಶಾಧಿಕಾರಿ, ನ್ಯಾಯವಾದಿ ಆಗಿರುವ ಶ್ರೀ ಪದ್ಮರಾಜ್ ಆರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ.) ಪುತ್ತೂರು ಇದರ ಅಧ್ಯಕ್ಷ ಶ್ರೀ ಸತೀಶ್ ಕುಮಾರ್ ಕೆಡೆಂಜಿ,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಉಪಾಧ್ಯಕ್ಷರಾದ, ಶ್ರೀ ರಾಜೇಶ್, ಡಾ. ಶ್ರೀ ಉಮ್ಮಪ್ಪ ಪೂಜಾರಿ ಪಿ., M.com, Phd ಅಸೋಸಿಯೇಟ್ ಪ್ರೊಫೆಸರ್, ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ, ಮಂಗಳೂರು, ಶ್ರೀ ರೋಹಿತಾಕ್ಷ ಬಾನಬೆಟ್ಟು, ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಳೆಂಜ, ದೇಂತಡ್ಕ, ಶ್ರೀ ಚಂದಪ್ಪ ಪೂಜಾರಿ, ಮಾಜಿ ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಳೆಂಜ ದೇಂತಡ್ಕ ಪ್ರಗತಿಪರ ಕೃಷಿಕರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಶ್ರೀ ಅಜಿತ್ ಕುಮಾರ್ ಪಾಲೇರಿ, ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು, ಶ್ರೀ ತನಿಯಪ್ಪ ಪೂಜಾರಿ, ಅಧ್ಯಕ್ಷರು, ಬಿರುವೆರ್ ಪೆರ್ನೆ, ಬಿಳಿಯೂರು, ಶ್ರೀ ಉದಯ್ ಪೂಜಾರಿ ಮಠಂತಬೆಟ್ಟು, ಕಾರ್ಯದರ್ಶಿ ಉಪಸ್ಥಿತಿಯಲ್ಲಿ ಇರಲಿದ್ದಾರೆ ಸಂಜೆ ಗಂಟೆ 5.00ಕ್ಕೆ ಭಜನೆ ಹಾಗೂ ಕಾರ್ಯಕ್ರಮ ಮುಗಿದ ನಂತರ ಊಟೋಪಚಾರ ನಡೆಯಲಿದೆ.