Sunday, November 24, 2024
ಸುದ್ದಿ

ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ(ರಿ.), ಬೆಳುವಾಯಿ ರಜತ ಸಂಭ್ರಮಾಚರಣೆ : ನ.12ರಂದು ನಡೆಯಲಿದೆ ಪ್ರಚಂಡ ಜೋಡಾಟ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ –ಕಹಳೆ ನ್ಯೂಸ್

ಮೂಡಬಿದಿರೆ : ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ (ರಿ.), ಬೆಳುವಾಯಿ ವತಿಯಿಂದ, ನ.12ರಂದು “ಪ್ರಚಂಡ ಜೋಡಾಟ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ” ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ(ರಿ.) ಇದರ ರಜತ ಸಂಭ್ರಮಾಚರಣೆ ಪ್ರಯುಕ್ತ, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಎಂ. ದೇವಾನಂದ ಭಟ್ ಸಂಯೋಜನೆಯಲ್ಲಿ ಮೂಡಬಿದಿರೆಯ ವಿದ್ಯಾಗಿರಿ ಆಳ್ವಾಸ್ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಆಶ್ರಯದಲ್ಲಿ ಯಕ್ಷಗಾನಲೋಕದ ಪ್ರಸಿದ್ಧ 150 ಕ್ಕೂ ಮಿಕ್ಕ ಕಲಾವಿದರ ಸಮಾಗಮದೊಂದಿಗೆ “ಪ್ರಚಂಡ ಜೋಡಾಟ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ” ಪ್ರದರ್ಶನಗೊಳ್ಳಲಿದೆ.

ಎಡನೀರು ಮಠದ ಪರಮಪೂಜ್ಯ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಮೂಡಬಿದಿರೆ ಜೈನ ಮಠದ ಮಹಾ ಸ್ವಾಮೀಜಿ ಭಾರತ ಭೂಷಣ ಡಾ, ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರು ಆಶೀರ್ವಚನ ನೀಡಲಿದ್ದು, ನಿವೃತ್ತ ಐಎಎಸ್ ಶ್ಯಾಮ್ ಭಟ್ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಮುಖ್ಯ ಅಭ್ಯಾಗತರಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷರು ಹಾಗೂ ದ.ಕ. ಸಂಸದರಾದ ನಳಿನ್ ಕುಮಾರ್ ಕಟೀಲು, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಸಚಿವರಾದ ಸುನಿಲ್ ಕುಮಾರ್, ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ, ಮೂಲ್ಕಿ ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಈಶ್ವರ ಭಟ್, ದ.ಕ. ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ., ಭಾಸ್ಕರ್ ಎಸ್. ಕೋಟ್ಯಾನ್, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಲದೀಪ್ ಚೌಟರ ಅರಮನೆ ಹಾಗೂ ಮತ್ತಿತ್ತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.