Wednesday, January 22, 2025
ಸುದ್ದಿ

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡ ಚಾಂಪಿಯನ್‌ಶಿಪ್ – ಕಹಳೆ ನ್ಯೂಸ್

ಪುತ್ತೂರು : ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಈಶ್ವರಮಂಗಲದ ಪಂಚಲಿAಗೇಶ್ವರ ಪದವಿ ಪೂರ್ವ ಕಾಲೇಜು ಇದರ ಸಹಯೋಗದೊಂದಿಗೆ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರು ಚಾಂಪಿಯನ್‌ಶಿಪ್ ತಂಡ ಪ್ರಶಸ್ತಿ ಪಡೆದುಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್ ವೈಯಕ್ತಿಕ ಚಾಂಪಿಯನ್ ಪಡೆದರು. ಅದೇ ರೀತಿ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.

ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರಜತ್ ಆರ್ ಭಟ್, ನಿತಿನ್ ಆರ್ ಎ, ಜಯಶೀಲ್ ರೈ, ಆರ್ಯ ಪಟೇಲ್, ಪವನ್ ಕುಮಾರ್, ಲೋಹಿತ್ ಎಸ್ ಡಿ, ಬೃಜೇಶ್ ಜಿ ರೈ, ಗಗನ್ ಶೆಣೈ, ಚರಣ್ ಪಿ, ಅನೀಷ್, ವಿಘ್ನೇಶ್ ಅಶ್ವಿತ್, ಧನುಷ್ ಕೆ, ಪ್ರಮಥ್, ಎಲ್. ಧನುಷ್, ನಿಹಾಲ್ ರಾಜ್, ಅಜಿತ್ ಭಾಗವಹಿಸಿದ್ದರು. ಬಾಲಕಿಯರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಪವಿತ್ರ ಭಟ್ ಕೆ, ಹೇಮಲತಾ, ಪೂಜಾಶ್ರೀ ಎ, ಕೀರ್ತಿಲತಾ, ದೀಕ್ಷಾ ಜಿ, ಮಂಜುಶ್ರೀ, ವಿನಿತಾ, ನಿತ್ಯಶ್ರೀ ರೈ, ಭವಿಷ್ಯ, ಭೂಮಿಕಾ, ಕುಸುಮ, ಸೌಮ್ಯ ರೈ ಭಾಗವಹಿಸಿದ್ದರು.
ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.