ರಾಜ್ಯಮಟ್ಟದ ಎಕ್ಸೆಲ್ ಶೋಧ ವಿಜ್ಞಾನ ಮೇಳದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ – ಕಹಳೆ ನ್ಯೂಸ್
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಅ.29ರಂದು ನಡೆದ ರಾಜ್ಯಮಟ್ಟದ ಶೋಧ ವಿಜ್ಞಾನ ಮತ್ತು ಕಲಾ ಸ್ಪರ್ಧೆ “ಎಕ್ಸೆಲ್ ಶೋಧ”ದಲ್ಲಿ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ವಿಜ್ಞಾನ ಮಾದರಿಯಲ್ಲಿ 8ನೇ ತರಗತಿಯ ಸಮನ್ವಿತಾ ( ಡಾ. ಗುರುರಾಜ್. ಎಂ ಮತ್ತು ಡಾ. ಶ್ರೀದೇವಿ ದಂಪತಿ ಪುತ್ರಿ) ಮತ್ತು ಲಕ್ಷ್ಯ(ಶ್ರೀ ದಿನೇಶ್ ಕುಮಾರ್ ಮತ್ತು ರೇಖಾ ದಂಪತಿ ಪುತ್ರಿ) – ಪ್ರಥಮ ಸ್ಥಾನ , ವಿಜ್ಞಾನ ರಸಪ್ರಶ್ನೆ- 10ನೇ ತರಗತಿಯ ಅನ್ವಿತ್.ಎನ್(ಶ್ರೀ ಶ್ರೀಪತಿ.ಎನ್ ಮತ್ತು ವಿದ್ಯಾಲಕ್ಷ್ಮೀ ದಂಪತಿ ಪುತ್ರಿ) ಮತ್ತು ಅಭಿರಾಮ್ ಭಟ್(ಶ್ರೀ ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ- 8ನೇ ತರಗತಿಯ ಜಿ.ವೈಷ್ಣವಿ ಪೈ(ಶ್ರೀ ನಾಗೇಶ್ ಪೈ ಮತ್ತು ಸಹನಾ ಪೈ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಪೆನ್ಸಿಲ್ ಸ್ಕೆಚ್ – 10ನೇ ತರಗತಿಯ ಕೀರ್ತನ್.ಕೆ(ಶ್ರೀ ಕಿಶನ್ ಭಟ್.ಎನ್.ಎಸ್ ಮತ್ತು ಉಷಾ.ಕೆ ದಂಪತಿ ಪುತ್ರ) – ದ್ವಿತೀಯ ಸ್ಥಾನ, ಪೈಂಟಿAಗ್- 8ನೇ ತರಗತಿಯ ಅನುಶ್ರೀ(ಮನಿಕಂಡನ್ ನಾಯರ್ ಮತ್ತು ಅನಿತಾ.ಎನ್ ದಂಪತಿ ಪುತ್ರಿ) – ದ್ವಿತೀಯ ಸ್ಥಾನ, ಚೆಸ್- 10ನೇ ತರಗತಿಯ ಪ್ರಣೀಲ್ ರೈ(ಶ್ರೀ ಪ್ರಕಾಶ್ ರೈ ಮತ್ತು ಸತ್ಯಲತ ದಂಪತಿ ಪುತ್ರ) – ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.3000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.2000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ಸಮಗ್ರ ಪ್ರಶಸ್ತಿಯು ರೂ.15000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕ ಒಳಗೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ್ಲ ತಿಳಿಸಿದ್ದಾರೆ.