Thursday, January 23, 2025
ಉಡುಪಿಸುದ್ದಿ

ಗೋವಿಗಾಗಿ ಮೇವು ಕಾರ್ಯಕ್ಕೆ ಕೈ ಜೋಡಿಸಿ 2 ಲೋಡ್ ಒಣಹುಲ್ಲು ನೀಡಿದ ಜಟ್ಟಿಗೇಶ್ವರ ಗೆಳೆಯರ ಬಳಗ ಕುಂಜಿಗುಡಿ ಸಾಲಿಗ್ರಾಮ ಕಾರ್ಕಳ – ಕಹಳೆ ನ್ಯೂಸ್

ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಕಾರ್ಯಕ್ರಮದ ಅಂಗವಾಗಿ ಜಟ್ಟಿಗೇಶ್ವರ ಗೆಳೆಯರ ಬಳಗ ಕುಂಜಿಗುಡಿ ಸಾಲಿಗ್ರಾಮ ಕಾರ್ಕಳ ಇವರ ನೇತೃತ್ವದಲ್ಲಿ 2 ಲೋಡ್ ಒಣಹುಲ್ಲು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಜಿಲ್ಲೆಯ ಪ್ರತಿ ಯುವಕ ಮಂಡಲಗಳು ವರ್ಷದಲ್ಲಿ ಒಂದು ದಿನ ಗೊಸೇವೆಗಾಗಿ ಮೀಸಲಿಟ್ಟರೆ ಗೋಶಾಲೆಗಳಲ್ಲಿನ ಮೇವಿನ ಅಭಾವ ನೀಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಜಿಲ್ಲಾ ಉಪಾಧ್ಯಕ್ಷ ವಿಜಯ್ ಗಾಣಿಗ ಸಾಲಿಗ್ರಾಮ , ಗೋವಿಗಾಗಿ ಮೇವು ಕೋಟ ವಲಯ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕಾರ್ಯದರ್ಶಿ ಕ್ರಷ್ಣಯ್ಯ ಆಚಾರ್,ಜಟ್ಟಿಗೇಶ್ವರ ದೇವಸ್ಥಾನ ಅಧ್ಯಕ್ಷರಾದ ಗಣೇಶ್ ನಾಯಿರಿ, ನರಸಿಂಹ ನಾಯಿರಿ, ಮಂಜುನಾಥ್ ನಾಯಿರಿ ಜಟ್ಟಿಗೇಶ್ವರ ಗೆಳೆಯರ ಬಳಗ ಕುಂಜಿಗುಡಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು