Friday, January 24, 2025
ಸುದ್ದಿ

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ “ಭಾರತ ದರ್ಶನ ಸರಮಾಲೆ” ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಭಾರತ ಇಂದು ಬದಲಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವ ಯುವಜನತೆಯು ಭಾರತೀಯ ಆಚಾರ ವಿಚಾರಗಳ ಕುರಿತು ತಿಳಿದುಕೊಳ್ಳುವುದು ಅನಿವಾರ್ಯ. ಅದರೊಂದಿಗೆ ಮಾದಕ ವಸ್ತುಗಳು, ಆಧುನಿಕತೆ ಮುಂತಾದವುಗಳಿಂದ ಪ್ರಪಾತಕ್ಕೆ ಬೀಳುತ್ತಿರುವ ಯುವಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಜೊತೆಗೆ ಭಾರತೀಯ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎನ್ ಕೃಷ್ಣ ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ “ಭಾರತ ದರ್ಶನ ಸರಮಾಲೆ” ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇದರ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ನಮ್ಮ ದೇಶ ಬಹಳ ಉತ್ಕಟ ಸಮಯದಲ್ಲಿರುವಾಗ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಆದುದರಿಂದ ಯುವ ಜನತೆ ಸಮಾಜ ನಿರ್ಮಾಣ ಮಾಡುವುದರ ಕಡೆಗೂ ಗಮನಕೊಡಬೇಕು ಮತ್ತು ಸಮಾಜದಲ್ಲಿ ತಾನು ಹೇಗಿರಬೇಕು ಎಂಬುವುದನ್ನು ಕೂಡಾ ತಿಳಿದುಕೊಂಡು ಸಂಸ್ಕøತಿಯ ಬಗ್ಗೆಯೂ ಅರಿತುಕೊಳ್ಳಬೇಕು. ಆ ಸಂಸ್ಕøತಿಯಲ್ಲೂ ಜಾಗೃತಿ ಬೇಕು.ಇದನ್ನು ನಾವು ಕಡ್ಡಾಯವಾಗಿ ಆಚರಿಸಲೂ ಬೇಕು ಎಂದು ನುಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ತೃತೀಯ ವರ್ಷದ ವಿದ್ಯಾರ್ಥಿ ಹರಿಪ್ರಸಾದ್ ಮಾತನಾಡಿ, “ಭಾರತ ದರ್ಶನ” ಭಗವದ್ಗೀತೆಗೆ ಸಮಾನವಾದ ಶ್ರೇಷ್ಠ ಗ್ರಂಥ. ಆಧುನೀಕತೆಯ ಅಮಲಿನಲ್ಲಿ ತೇಲುತ್ತಿರುವ ಇಂದಿನ ಈ ಸಮಾಜಕ್ಕೆ ರಾಷ್ಟ್ರೀಯ ತತ್ವವನ್ನು ರಾಷ್ಟ್ರೀಯ ವಿಚಾರಧಾರೆಯನ್ನು ನೀಡುವಂತಹ ಪುಸ್ತಕ ಈ ಭಾರತ ದರ್ಶನ ಗ್ರಂಥ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಚಿಂತನೆ ಅನಿವಾರ್ಯ. ದೇಶಕ್ಕಾಗಿ ನಮ್ಮ ಕೈಯಿಂದ ಆಗುವಷ್ಟು ಕೊಡುಗೆಯನ್ನು ನೀಡಬೇಕು. ಅಂತೆಯೇ ವಿದ್ಯಾರ್ಥಿಗಳು ಸಕರಾತ್ಮಕ ಪರಿವರ್ತನೆ ಹೊಂದಿ ರಾಷ್ಟ್ರ ಚಿಂತನೆಯ ಕಡೆಗೆ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎಸ್ , ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್, ಡಾ.ವಿಷ್ಣು ಕುಮಾರ್ ಉಪಸ್ಥಿತರಿದ್ದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ.ಎಸ್ ವಂದಿಸಿ, ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ನಿರೂಪಿಸಿದರು.