Friday, January 24, 2025
ಸುದ್ದಿ

ಉಡುಪಿಯ ಥಂಡರ್ ಗ್ರ್ಯಾಂಡ್ ಹಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಮಥ ಎಂ ಭಟ್ ಗೆ ತೃತೀಯ ಸ್ಥಾನ – ಕಹಳೆ ನ್ಯೂಸ್

ಉಡುಪಿಯ ಥಂಡರ್ ಗ್ರ್ಯಾಂಡ್ ಹಾಲ್ ನಲ್ಲಿ ನ.6ರಂದು ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿವೇಕ ನಗರ ತೆಂಕಿಲ ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿ ಪ್ರಮಥ ಎಂ ಭಟ್ (ಮೈತ್ರಿ ಎಲೆಕ್ಟ್ರಿಕಲ್ಸ್ ನ ಮಾಲಕ ರವಿನಾರಾಯಣ ಎಂ ಹಾಗೂ ಶರಾವತೀ ದಂಪತಿ ಪುತ್ರ), ಇವರು ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. Institute of Karate And Martial Arts ( JSKA) ಪುತ್ತೂರು ಶಾಖೆಯ ವಿಧ್ಯಾರ್ಥಿಯಾಗಿರುವ ಇವರು ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು