Friday, September 20, 2024
ಸುದ್ದಿ

ಕಾಸರಗೋಡು ನಗರದ ಹೊರವಲಯದಲ್ಲಿ ಸರಣಿ ಅಪಘಾತ ; ಐದು ವರ್ಷದ ಬಾಲಕ ಸಾವು – ಕಹಳೆ ನ್ಯೂಸ್

ಕಾಸರಗೋಡು, ಜು 23 : ಕಾಸರಗೋಡು ನಗರದ ಹೊರವಲಯದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಜು. 22 ರ ಭಾನುವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಗು ಮೃತಪಟ್ಟು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಕಾರು , ಬಸ್ಸು ಮತ್ತು ಬೈಕ್ ನ ನಡುವೆ ಈ ಅಪಘಾತ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಕಡೆಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ಸು , ಬೈಕ್ ಹಾಗೂ ಕುಂಬಳೆ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ ನಡೆದಿದೆ.ರಸ್ತೆಯ ಹೊಂಡ ಗಳನ್ನು ತಪ್ಪಿಸುವ ಭರದಲ್ಲಿ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಬೈಕ್ ನಲ್ಲಿದ್ದ ಐದು ವರ್ಷದ ಬಾಲಕ ಮೃತಪಟ್ಟಿದ್ದಾನೆ . ಮೃತಪಟ್ಟವನನ್ನು ಮಿನ್ ಹಾಜ್ ಎಂದು ಗುರುತಿಸಲಾಗಿದೆ. ಮಿನ್ ಹಾಜ್ ನ ತಂದೆ ಮತ್ತು ಸಹೋದರಿ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ .ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದಾರೆ . ಕಾರಲ್ಲಿದ್ದವರು ಮೇಲ್ಪರಂಬ ನಿವಾಸಿಗಳೆಂದು ತಿಳಿದುಬಂದಿದೆ.ಗಾಯಾಳುಗಳನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಹಲವು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು

ಜಾಹೀರಾತು