ತಾನೇ ಕಲಿಸಿದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಶಿಕ್ಷಕಿಯೊಬ್ಬಳು ಲಿಂಗಪರಿವರ್ತನೆ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿರುವ ಅಪರೂಪದ ಘಟನೆ ರಾಜಸ್ಧಾನದಲ್ಲಿ ನಡೆದಿದೆ.
ರಾಜಸ್ಥಾನದ ಭರತ್ ಪುರ್ ಶಾಲೆಯ ದೈಹಿಕ ಶಿಕ್ಷಕಿ ಮೀರಾ ಎಂಬಾಕೆಯೇ ಲಿಂಗಪರಿವರ್ತನೆ ಮಾಡಿಕೊಂಡಾಕೆ. ಈಕೆ ತನ್ನ ವಿದ್ಯಾರ್ಥಿನಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ ಕಲ್ಪನಾ ಪೌಜ್‌ದಾರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದಳು. ಈಕೆಯ ಪ್ರೀತಿಯನ್ನು ಕಲ್ಪನಾಳೂ ಒಪ್ಪಿಕೊಂಡಿದ್ದಳು. ಬಳಿಕ ಆಕೆಯನ್ನು ವಿವಾಹವಾಗುವ ಸಲುವಾಗಿ ಮೀರಾ ಲಿಂಗಪರಿವರ್ತನೆ ಮಾಡಿಸಿಕೊಂಡು ಆರವ್ ಕುಂತಲ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.
ಕಲ್ಪನಾಳಾ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಮೀರಾ ತರಬೇತಿ ವೇಳೆ ಆಕೆಯೊಂದಿಗೆ ಮಾತನಾಡುತ್ತಾ, ನಿಧಾನಕ್ಕೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆಕೆಯ ಪ್ರೀತಿಗೆ ಒಪ್ಪಿದ್ದ ಕಲ್ಪನಾ ಆಕೆ ಹುಡುಗನಾಗಬೇಕೆಂದು ಬಯಸುತ್ತಿದ್ದಳಂತೆ. ಇತ್ತ ಹೆಣ್ಣಾಗಿದ್ದ ಮೀರಾಳಿಗೆ ತಾನೂ ಹುಡುಗ ಎಂಬ ಕಲ್ಪನೆಯಿತ್ತಂತೆ. ಕೊನೆಗೆ ಶಸ್ತ್ರಚಿಕಿತ್ಸೆಗೊಳಪಟ್ಟು ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾಳೆ.
“ನನ್ನ ದೇಹವನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟಕರವಾದ ಕಾರಣ ನಾನು ನನ್ನ ಲಿಂಗವನ್ನು ಬದಲಾಯಿಸಲು ಬಯಸಿದ್ದೇನೆ. ನಾನು 2010 ರಲ್ಲಿ ಲಿಂಗ ಬದಲಾವಣೆಯ ಕುರಿತು ಲೇಖನವನ್ನು ಓದಿದ್ದೇನೆ. ಅಂದಿನಿAದ, ನಾನು ನನ್ನ ಲಿಂಗವನ್ನು ಬದಲಾಯಿಸುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲು ನನ್ನ ಮನಸ್ಸನ್ನು ಸಿದ್ಧಪಡಿಸಿದೆ” ಆರವ್ ಹೇಳಿದ್ದಾರೆ.
ಯೂಟ್ಯೂಬ್ ಮೂಲಕ ಆರವ್ ತನಗೆ ಶಸ್ತ್ರಚಿಕಿತ್ಸೆ ಮಾಡಿದ ದಿಲ್ಲಿ ಮೂಲದ ವೈದ್ಯರ ಬಗ್ಗೆ ಅರಿತುಕೊಂಡಿದ್ದಾರೆ.
“ನಾನು ವೈದ್ಯರನ್ನು ಸಂಪರ್ಕಿಸಿದೆ, ಬಳಿಕ ಚಿಕಿತ್ಸೆ ಪ್ರಾರಂಭವಾಯಿತು. ಮೊದಲ ಪರೀಕ್ಷೆಯನ್ನು ಡಿಸೆಂಬರ್ 25, 2019 ರಂದು ಮಾಡಲಾಯಿತು. ಅಂತಿಮ ಶಸ್ತ್ರಚಿಕಿತ್ಸೆಯನ್ನು 2021 ರ ಡಿಸೆಂಬರ್ ನಲ್ಲಿ ನಡೆಸಲಾಯಿತು” ಎಂದು ಅವರು ಹೇಳಿದ್ದಾರೆ.
ನಮ್ಮ ಸಂಬAಧದ ಬಗ್ಗೆ ಕಲ್ಪನಾ ತನ್ನ ಕುಟುಂಬಕ್ಕೆ ತಿಳಿಸಿದಳು. ಆಕೆಯ ಕುಟುಂಬವು ತಕ್ಷಣವೇ ಪ್ರಸ್ತಾಪವನ್ನು ಒಪ್ಪಿಕೊಂಡಿತು ಎಂದು ಆರವ್ ತಿಳಿಸಿದ್ದಾರೆ
ಕಬಡ್ಡಿ ಆಟಗಾರ್ತಿಯಾಗಿರುವ ಕಲ್ಪನಾ, ಕ್ರೀಡೆಯಲ್ಲಿ ತಾನು ಮಾಡಿದ ಎಲ್ಲಾ ಸಾಧನೆಗಳು ಆರವ್‌ಗೆ ಸಲ್ಲುತ್ತದೆ ಎಂದಿದ್ದಾರೆ. ಅವರ ಬೆಂಬಲವೇ ತನಗೆ ಮೂರು ರಾಜ್ಯ ಮಟ್ಟದ ಮತ್ತು ಒಂದು ರಾಷ್ಟ್ರ ಮಟ್ಟದ ಆಟವನ್ನು ಆಡಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.
ಆರವ್ ಚಿಕ್ಕಂದಿನಿAದಲೂ ಹುಡುಗನಂತೆ ಬದುಕುತ್ತಿದ್ದ ಎಂದು ಆರವ್ ತಂದೆ ಬಿರಿ ಸಿಂಗ್ ಹೇಳಿದ್ದಾರೆ.
ಇನ್ನು ಆರವ್ (ಮೀರಾ) ಅವರನ್ನು ನಾನು ಹಲವು ಸಮಯಗಳಿಂದ ಪ್ರೀತಿಸುತ್ತಿದ್ದು, ಒಂದು ವೇಳೆ ಅವರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳದಿದ್ದರೂ ನಾನವರನ್ನು ಮದುವೆಯಾಗುತ್ತಿದ್ದೆ ಎಂದು ಕಲ್ಪನಾ ಹೇಳಿದ್ದಾಳೆ.