ಮಂಗಳೂರಿನ ಮಳಲಿ ಮಸೀದಿ V/S ವಿಎಚ್ ಪಿ ಪೈಟ್ ವಿಚಾರ : ವಿಎಚ್ ಪಿ ಅರ್ಜಿ ವಿಚಾರಣೆ ನಡೆಸಬಹುದು ಎಂದ ನ್ಯಾಯಾಲಯ – ಕಹಳೆ ನ್ಯೂಸ್
.ವಿವಾದಿತ ಮಂಗಳೂರಿನ ಮಳಲಿ ಮಸೀದಿ ವಿಚಾರದಲ್ಲಿ ವಿಎಚ್ ಪಿಗೆ ಆರಂಭಿಕ ಗೆಲುವಾಗಿದೆ. ಮಸೀದಿಯ ಸರ್ವೇ ನಡೆಸಲು ವಿಎಚ್ ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.ಅರ್ಜಿ ವಿಚಾರಣೆ ನಡೆಸಬಾರದೆಂಬ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಜಾ ಜ್ಞಾನವಾಪಿ ಮಸೀದಿಯ ವಿವಾದ ಆರಂಭವಾದ ಸಂದರ್ಭದಲ್ಲೇ ಮಂಗಳೂರಿನ ಮಳಲಿ ಮಸೀದಿ ವಿವಾದ ಆರಂಭಗೊಂಡಿತ್ತು.2022ರ ಎಪ್ರೀಲ್ 21 ರಂದು ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯ ನವೀಕರಣಕ್ಕಾಗಿ ಒಂದು ಭಾಗವನ್ನು ಕೆಡವಿದಾಗ ಹಿಂದೂ ದೇವಸ್ಥಾನದ ಮಾದರಿ ಪತ್ತೆಯಾಗಿತ್ತು.ಹೀಗಾಗಿ ವಿಶ್ವ ಹಿಂದೂ ಪರಿಷತ್ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕಾಮಗಾರಿ ಸ್ಥಗಿತಗೊಂಡಿತ್ತು.ಬಳಿಕ ವಿಎಚ್ ಪಿ ತಾಂಬೂಲ ಪ್ರಶ್ನೆ ಇಟ್ಟಿದ್ದು ಅದರಲ್ಲಿ ಮಸೀದಿ ಇರೋ ಜಾಗದಲ್ಲಿ ಹಿಂದೂ ದೇವಸ್ಥಾನ ಇತ್ತು ಅನ್ನೋದು ಪ್ರಶ್ನಾ ಚಿಂತನೆಯಲ್ಲಿ ಬೆಳಕಿಗೆ ಬಂದಿತ್ತು.ಹೀಗಾಗಿ ಮಸೀದಿ ಇರೋ ಜಾಗದಲ್ಲಿ ಸರ್ವೇ ನಡೆಸಬೇಕೆಂದು ವಿಎಚ್ ಪಿ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.ಆದ್ರೆ ಸರ್ವೇ ನಡೆಸುವ ಅರ್ಜಿಗೆ ತಡೆ ನೀಡಬೇಕೆಂದು ಮಸೀದಿ ಆಡಳಿಯ ಮಂಡಳಿಯೂ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಲಯ ಇಂದು ತೀರ್ಪು ನೀಡಿದ್ದು,ಸರ್ವೆ ನಡೆಸುವ ಅರ್ಜಿಯ ವಿಚಾರಣೆಯನ್ನು 2023 ರ ಜನವರಿ 8 ರಿಂದ ವಿಚಾರಣೆ ನಡೆಸಲು ಆದೇಶಿಸಿದೆ.
ಮಸೀದಿ ಇರೋ ಜಾಗ ವಕ್ಫ್ ಬೋರ್ಡ್ ನ ಜಾಗವಾಗಿದ್ದು ಇದನ್ನು ಸಿವಿಲ್ ನ್ಯಾಯಾಲಯ ವಿಚಾರಣೆ ಮಾಡಲು ಅವಕಾಶ ಇಲ್ಲ,ವಕ್ಫ್ ಟ್ರಿಬುನಲ್ ಕೋರ್ಟ್ ಮಾಡಬೇಕೆಂದು ಮಸೀದಿ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು.ಇದರ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದ್ದು,ವಿಎಚ್ ಪಿಯ ಅರ್ಜಿ ವಿಚಾರಣೆ ನಡೆಸಲು ಆದೇಶಿಸಿದೆ.ಹೀಗಾಗಿ ಮಸೀದಿಯ ಸರ್ವೆ ನಡೆಸಲು ವಿಎಚ್ ಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ವಾದ ಆರಂಭಿಸಲು ಸೂಚಿಸಿದೆ. ಇದು ವಿಎಚ್ ಪಿಗೆ ಸಿಕ್ಕ ಆರಂಭಿಕ ಗೆಲುವಾಗಿದ್ದು,ವಿಎಚ್ ಪಿ ಕಾರ್ಯಕರ್ತರು ತಮ್ಮ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮಸೀದಿ ಇರೋ ಜಾಗದಲ್ಲಿ ಶಿವನ ಶಕ್ತಿ ಇದೆ ಅನ್ನೋದು ಈ ಹಿಂದೆ ತಾಂಬೂಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತು. ಇದೀಗ ಮಸೀದಿಯ ಒಳಗೆ ಸರ್ವೆ ನಡೆಸುವ ಅರ್ಜಿಯನ್ನೂ ನ್ಯಾಯಾಲಯ ಪುರಸ್ಕರಿಸಿ ವಿಚಾರಣೆ ಆರಂಭಿಸಲು ಆದೇಶಿಸಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ಸರ್ವೇ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಅಥವಾ ಮಸೀದಿ ಆಡಳಿತ ಮಂಡಳಿ ಮತ್ತೆ ಮೇಲ್ಮನವಿ ಸಲ್ಲಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.