Sunday, November 24, 2024
ಸುದ್ದಿ

ವಿ.ಸಿ.ಇ.ಟಿ: ಕೇಶದಾನ ಶಿಬಿರ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಎನ್‌.ಎಸ್‌.ಎಸ್ ಮತ್ತು ವೈ.ಆರ್‌.ಸಿ, ಐ.ಎಸ್‌.ಟಿ.ಇ ಅಧ್ಯಕ್ಷರು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ಸೀಡ್ಸ್ ಆಫ್ ಹೋಪ್ ಸಹಯೋಗದಲ್ಲಿ ನ.7 ರಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಏಂಡ್ ಟೆಕ್ನಾಲಜಿಯಲ್ಲಿ ಕೇಶದಾನ ಶಿಬಿರ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕನ್ಸಲ್ಟೆಂಟ್ ಸರ್ಜಿಕಲ್ ಒಂಕಾಲೊಜಿಸ್ಟ್ ಡಾ.ಕಾರ್ತಿಕ್ ಕೆ. ಎಸ್ ಇವರು ಕ್ಯಾನ್ಸರ್ ಜಾಗೃತಿಯ ಮಹತ್ವದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

ಡಾ.ಸುರೇಶ್ ಪುತ್ತೂರಾಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಶಾ ಮತ್ತು ಕನ್ಯಾ ಮುಖ್ಯ ಅತಿಥಿಗಳಾಗಿ ಸೀಡ್ಸ್ ಆಫ್ ಹೋಪ್ ತಂಡವನ್ನು ಪ್ರತಿನಿಧಿಸಿದರು.

ಶ್ರೀ ಕೇಶವ ಪ್ರಸಾದ್ ಮುಳಿಯ ಸಹ ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ನೀಡಿದರು. MLBA, ಪುತ್ತೂರಿನ ಸಂಯೋಜಕರಾದ ಶ್ರೀಮತಿ ನಿಶ್ಚಲ ಆಳ್ವ ಉಪಸ್ಥಿತರಿದ್ದರು. ಇವರು ದಾನಿಗಳ ಕೂದಲನ್ನು ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಚಾಲನೆ ನೀಡಿದರು. ಸಂಸ್ಥೆಯು ಇವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿತು.

ವಿ.ಸಿ.ಇ.ಟಿ. ಸಂಯೋಜಕರು ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು. ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ದಾನಿಗಳು ಪಾಲ್ಗೊಂಡಿದ್ದರು. ಕೇಶದಾನ ಶಿಬಿರವನ್ನು ‘ಸೀಡ್ಸ್ ಆಫ್ ಹೋಪ್’ ತಂಡ ವು ಬಹಳ ಯಶಸ್ವಿಯಾಗಿ ಆಯೋಜಿಸಿದ್ದು, ದಾನಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.