ಪುತ್ತೂರು : ಸಂತ ಪಿಲೋಮಿನಾ ಕಾಲೇಜಿನ 2022-23ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ನಡೆಸಲಾಯಿತು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ವಿದ್ಯಾರ್ಥಿಸಂಘ ಇವುಗಳು ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಭಾಗವಹಿಸಿದ ಕಾಲೇಜನ ಉಪ ಪ್ರಾಂಶುಪಾಲರಾದ ಪ್ರೊ.ಗಣೇಶ್ ಭಟ್ ರವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿಗಳು ಮತ್ತು ಅವುಗಳನ್ನು ನಿಭಾಯಿಸುವ ಪರಿ ಹೇಗೆ ಎನ್ನುವ ನುಡಿಗಳೊಂದಿಗೆ 64 ವರ್ಷಗಳ ಇತಿಹಾಸವುಳ್ಳ ಈ ಕಾಲೇಜಿನ ಆಶೋತ್ತರಗಳಿಗೆ ಸದಾ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು, ಹಾಗೂ ಕಾಲೇಜಿನ ಶಿಸ್ತು ಪರಿಪಾಲನೆಯ ಕಡೆಗೆ ವಿಶೇಷ ಗಮನ ಹರಿಸಬೇಕು ಎನ್ನುವ ಕರೆ ನೀಡಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರು ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರೂ ಆದ ಡಾ. ಎ. ಪಿ. ರಾಧಾಕೃಷ್ಣರವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ನಾಯಕತ್ವಗುಣ ಹಾಗೂ ಕಾಲೇಜಿನಲ್ಲಿ ದೊರಕುವ ಅವಕಾಶಗಳ ಸದುಪಯೋಗದಿಂದ ಕ್ರಿಯಾಶೀಲರಾಗಿ ಮುನ್ನಡೆದು ಮುಂದೆ ದೇಶದ ಸತ್ಪ್ರಜೆಗಳಾಗಿ ಬಾಳಬೇಕು ಎಂದು ನುಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಹಾಗೂ ಭಾರತಿ ಎಸ್ ರೈ ಇವರು ವಿದ್ಯಾರ್ಥಿಸಂಘದ ಪದಾಧಿಕಾರಿಗಳು ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ಸಂಘದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ವಿನ್ಸ್ಟನ್ ಜೋಯ್ ಮಿನೇಜಸ್ ಹಾಗೂ ನಾಗ ಪ್ರಸಾದ್ ಪ್ರಾರ್ಥಿಸಿದರು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಆಶಿಕ್ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಶಿವಾನಿ ವಂದನಾರ್ಪಣೆಗೈದರು, ಕಾರ್ಯದರ್ಶಿ ಅನುಶ್ರೀ ಕಾರ್ಯಕ್ರಮ ನಿರೂಪಸಿಸದರು.