Recent Posts

Monday, January 20, 2025
ಸುದ್ದಿ

ಕರ್ತವ್ಯಲೋಪ-BEO ಮಂಜುನಾಥ್‌ನನ್ನು ಸಸ್ಪೆಂಡ್ ಮಾಡಿದ ಸರ್ಕಾರ – ಕಹಳೆ ನ್ಯೂಸ್

ಉಡುಪಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಬೈಂದೂರು ಬಿಇಓಗೆ ಅಮಾನತು ಶಿಕ್ಷೆ ಜಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನ್ನೆ ನಡೆದ ಸಿಎಂ ಜನಸ್ಪಂದನಕ್ಕೆ ಬಿಇಓ ಮಂಜುನಾಥ್ ಅವರು ಜನಸೇರಿಸುವ ಕೆಲಸವನ್ನು ಮಾಡಿದ್ದರು. ಸರಕಾರಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಎಂ ಸಭೆಗೆ ಹಾಜಾರಾಗುವಂತೆ ಆದೇಶ ಹೊರಡಿಸಿದ್ದರು.

ಸದರಿ ಕಾರ್ಯಕ್ರಮಕ್ಕೆ ಭಾಗವಹಿಸಲು ಸೂಚಿಸಿರುವುದು ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆಯಾಗಿದ್ದು ಸದರಿಯವರು ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದರಿಂದ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇವರು ಹೊರಡಿಸಿದ್ದ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಸಿಎಂ ಜಿಲ್ಲೆಗೆ ಬಂದ ದಿನವೇ ಸುದ್ದಿ ಕೂಡಾ ಪ್ರಸಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ಬೈಂದೂರು ಬಿಇಓ ಮಂಜುನಾಥ್ ಗೆ ಅಮಾನತು ಶಿಕ್ಷೆ ಆದೇಶವಾಗಿದೆ ಎಂದು ತಿಳಿದು ಬಂದಿದೆ.