Sunday, January 19, 2025
ಸುದ್ದಿ

ತಲಪಾಡಿ – ಕಾಸರಗೋಡು ಹೆದ್ದಾರಿ ಗುಂಡಿ ; ಸಂಚಾರ ಸಮಸ್ಯೆ – ಕಹಳೆ ನ್ಯೂಸ್

ಕುಂಬಳೆ: ಮಳೆಗೆ ಹೆದ್ದಾರಿಯಲ್ಲಿ ಹೊಂಡಗಳಾಗಿ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಆದರೆ ಇದು ತಮಗೆ ಸಂಬಂಧ ಪಟ್ಟದಲ್ಲವೆಂದು  ಇಲಾಖೆ ಅಧಿಕಾರಿಗಳು ಬೆಚ್ಚಗೆ  ಹೊದ್ದು ಮಲಗಿದ್ದಾರೆ.

ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪ್ಪಾಡಿಯಿಂದ ಕಾಸರಗೋಡು ತನಕ ರಸ್ತೆಯುದ್ದಕ್ಕೂ ಇಂಗು ಗುಂಡಿಗಳಾಗಿವೆ.ಕೆಲ ಕಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹಳ್ಳ ಸೃಷ್ಟಿಯಾಗಿದೆ.ತಲಪ್ಪಾಡಿ,ಮಂಜೇಶ್ವರ,ಉಪ್ಪಳ,ಕುಂಬಳೆ,ಪೆರ್ವಾಡು,
ಮೊಗ್ರಾಲ್‌,ಚೌಕಿ,ಕೊಪ್ಪರಬಜಾರ್‌,ಅಡ್ಕತ್ತಬೈಲು,ತಾಳಿಪ್ಪಡು,ಕರಂದಕ್ಕಾಡು ಮೊದಲಾದೆಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹೊಂಡಗಳು ಸೃಷ್ಟಿಯಾಗಿ ವಾಹನಗಳಿಗೆ ಸಂಚರಿಸಲು ತೊಡಕಾಗಿದೆ.ಇದರಿಂದ  ರಸ್ತೆಯಲ್ಲಿ ವಾಹನಗಳು ಜೋಕಾಲಿಯಾಡುತ್ತಿದೆ.ಬಸ್‌ನಲ್ಲಿ ಪ್ರಯಾಣಿಕರು ಭಯದಿಂದ ಪ್ರಯಾಣಿಸಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರೀ ಹೊಂಡ ಸೃಷ್ಟಿ
ಕಣಿಪುರ ಗೋಪಾಲಕೃಷ್ಣ ಕ್ಷೇತ್ರದ ಮುಂದೆ ಭಾರೀ ಹೊಂಡ ಸೃಷ್ಟಿಯಾಗಿ ತಿಂಗಳೇ ಸಂದಿದೆ.ಇಲ್ಲಿ ಅಪಾಯದ ಸೂಚನೆ ಫಲಕ ನಾಟಲಾಗಿದೆ.ರಸ್ತೆ ಹೊಂಡಗಳಿಂದಲಾಗಿ ಈ ಪ್ರದೇಶದಲ್ಲಿ ವಾಹನಗಳಿಗೆ ನಿತ್ಯ ಸಂಚಾರಕ್ಕೆ ತಡೆಯಾಗುತ್ತಿದೆ. ಕುಂಬಳೆ ಸೇತುವೆ ಬಳಿಯಿಂದ ವಾಹನಗಳ ಸರತಿ ಸಾಲು ಅರಿಕ್ಕಾಡಿ ಹನುಮಾನ್‌ ಕೇÒತ್ರದ ತನಕ ಹನುಮಂತನ ಬಾಲದಂತೆ ಉದ್ದಕ್ಕೆ ಬೆಳೆದಿರುತ್ತದೆ.ರಸ್ತೆಯ ವಿರುದ್ಧ ಭಾಗದಲ್ಲಿ ಕುಂಬಳೆ ಪೇಟೆಯ ತನಕ ವಾಹನಳು ರಸ್ತೆಯಲ್ಲೇ ಉಳಿಯಬೇಕಾಗುತ್ತದೆ.ಹೆಚ್ಚಿನ ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ತಲಪಲು ಅಸಾಧ್ಯವಾಗಿ ಕೆಲವು ಟ್ರಿಪ್‌ಗ್ಳನ್ನು ಮೊಟಕುಗೊಳಿಸುವುದು ಅನಿವಾರ್ಯ. ರಾತ್ರಿ ಸಂಚರಸುವ ವಾಹನಗಳು ಕೆಸರು ನೀರು ತುಂಬಿದ ಹೊಂಡಗಳಿಗೆ ಬಿದ್ದು ಎದ್ದು ಹೋಗಬೇಕಾಗಿದೆ.ಅನೇಕ ಸಣ್ಣ ವಾಹನಗಳು ಅಪಘಾತಕ್ಕೆ ಈಡಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲಾಖೆಯ ಕುಂಟು ನೆಪ 
ರಸ್ತೆ ಹೊಡ ಮುಚ್ಚಲು ಪ್ಯಾಚ್‌ ವರ್ಕ್‌ ಗೆ 70 ಲಕ್ಷ ಮಂಜೂರಾಗಿದೆ.ಆದರೆ ಕಾಮಗಾರಿ ನಡೆಸಲು ಗುತ್ತಿಗೆದಾರರು ಹಿಂದೇಟು ಹಾಕುವರಂತೆ.2.10 ಕೋಟಿ ನಿಧಿಗೆ ಪ್ರಸ್ತಾವನೆ ಸಲ್ಲಿಸಿದರೂ ಕೇವಲ 70 ಲಕ್ಷ ಮಂಜೂರುಗೊಂಡಿದೆ ಇ ದರಲ್ಲಿ ಎಲ್ಲಾ ಹೋಂಡಗಳನು  ಹೇಗೆ ಮುಚ್ಚಲಿ ಎಂಬ ಚಿಂತೆಯಲ್ಲಿ ಇಲಾಖೆ ತಲೆಬಿಸಿಯಲ್ಲಿದೆ.ಧಾರಾಕಾರ ಮಳೆ ಸುರಿಯುವುದರಿಂದ ಹೆದ್ದಾರಿ ಹೊಂಡಗಳನ್ನು ಮುಚ್ಚಲು ಅಸಾಧ್ಯವೆಂಬ ಸಬೂಬು ಕೇಳಿ ಬರುತ್ತಿದೆ.ಆದರೆ ಭಾರೀ ಹೊಂಡಗಳಿಗೆ ಕನಿಷ್ಟ ಜಲ್ಲಿಯನ್ನಾದರೂ ತುಂಬಿಸಿ ರಸ್ತೆ ಹೊಂಡಗಳಿಗೆ  ಮೋಕ್ಷ ಮಾಡಬಹುದಿತ್ತು.ಆದುದರಿಂದ ರಸ್ತೆ ಹೊಂಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಲ್ಲದೆ ಹೊಂಡಗಳ ಗಾತ್ರವೂ ದೊಡ್ಡದಾಗುತ್ತಿದೆ.

ಸಾಕಾರಗೊಳ್ಳದ ಚತುಷ್ಪಥ
ಕರ್ನಾಟಕದ ತಲಪಾಡಿ ತನಕ ರಸ್ತೆ 60 ಮೀಟರ್‌ ಅಗಲಗೊಂಡಿದೆ.ಆದರೆ ಇದು ಮುಂದೆ ಸಾಗಲೇ ಇಲ್ಲ.ಕೇರಳದಲ್ಲಿ 40 ಮೀಟರ್‌ ಅಗಲದ ಹೆದ್ದಾರಿಗೆ ಇನ್ನೂ ಕಾಲಕೂಡಿ ಬಂದಿಲ್ಲ. ಹಿಂದಿನ ಮತ್ತು ಇಂದಿನ ರಾಜ್ಯ ಸರಕಾರಗಳ ಅನಾಸ್ಥೆಯಿಂದ ಮತ್ತು ಸಂಸದರ ಮತ್ತು ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ  ರಸ್ತೆ ಅಗಲಗೊಳ್ಳದೆ ಉಳಿದಿದೆ.ರಸ್ತೆ ಅಗಲಕ್ಕೆ ಬೇಕಾದ ಸ್ಥಳವನ್ನು ವಶಪಡಿಸಲು ರಾಜ್ಯ ಸರಕಾರದ‌ ನಿಧಾನವೇ ಪ್ರಧಾನ ನೀತಿ ತೊಡಕಾಗಿದೆ.

ಸಣ್ಣರಾಜ್ಯವೆಂದು 60 ಮೀಟರ್‌ ರಸ್ತೆ ಅಗಲದಿಂದ 40 ಮೀಟರ್‌ಗೆ ಸೀಮಿತವಾಗಿರುವ ರಸ್ತೆ ಕಾಮಗಾರಿ ನಡೆದಲ್ಲಿ ವಾಹನ ದಟ್ಟಣೆಗೆ ಮೋಕ್ಷವಾಗಲಿದೆ.ಆದರೆ ಇದಕ್ಕೆ ರಾಜ್ಯ ಸರಕಾರ ಮುಂದಾಗಬೇಕಿದೆ. ವರ್ಷದಿಂದ ವರ್ಷಕ್ಕೆ ವಾಹನ ತೆರಿಗೆ, ಬಿಡಿ ಭಾಗಗಗಳ ಬೆಲೆ ಏರಿಕೆ ಯಾಗುತ್ತಿದ್ದರೂ ವಾಹನಗಳಿಗೆ ಸಂಚಾರಕ್ಕೆ ರಸ್ತೆ ಸರಿಪಡಿಸ ಬೇಕಾದ  ಜವಾದ್ದಾರಿ ಸರಕಾರಕ್ಕೆ ಇಲ್ಲವೇ ಎಂಬ ಪ್ರಶ್ನೆ ವಾಹನ ಮಾಲಕರದು.

ವಾಹನಗಳ ಸಂಖ್ಯೆ ಏರಿಕೆ,ಕಳಪೆ ಕಾಮಗಾರಿ 
ದಿನದಿಂದ ದಿನಕ್ಕೆ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಖ್ಯೆ ಏರುತ್ತಿದೆ. ವಾಹನಗಳ ದಟ್ಟಣೆ ಅಧಿಕವಾಗುತ್ತಿದೆ.ರಸ್ತೆ ಗುತ್ತಿಗೆದಾರರ ಕಳಪೆ ಕಾಮಗಾರಿಯ ಕಳ್ಳತನಕ್ಕೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಕೆಲವು ಅಧಿಕಾರಿಗಳು ಬೆಳಕು ತೋರಿಸಿದ ಪರಿಣಾಮದಿಂದ ರಸ್ತೆ ಬೇಗನೆ ಕೆಡುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ.

ಶಿಥಿಲ ಸೇತುವೆಗಳು 
ಭಾರೀಮಳೆ ಪರಿಣಾಮದಿಂದ  ರೈಲ್ವೆ ಸೇತುವೆಗಳತ್ತ ನಿಗಾ ಇರಿಸಬೇಕೆಂಬುದಾಗಿ ರೈಲ್ವೆ ಮಂತ್ರಾಲಯ ಎಚ್ಚರಿಸಿದೆ.ಅಂತೆಯೇ ಹೆದ್ದಾರಿಯ ಕೆಲವು ಹಳೆಯ ಸೇತುವೆಗಳು ಅಪಾಯವನ್ನು ಆಹ್ವಾನಿಸುತ್ತಿವೆ.ಮಂಜೇಶ್ವರ,ಮಂಗಲ್ಪಾಡಿ ಕುಕ್ಕಾರು,ಕುಂಬಳೆ ಮೊಗ್ರಾಲ್‌ ಸೇತುವೆಗಳು ಶಿಥಿಲವಾಗಿದ್ದು ಇದಕ್ಕೆ ಹಲವು ಬಾರಿ ತೇಪೆ ಹಾಕಲಾಗಿದೆ.ಆಗಲಕಿರಿದಾದ ಈ ಸೇತುವೆಗಳಿಗೆ ಭದ್ರತೆಯ ಅಪಾಯ ಎದುರಾಗಿದೆ