ಪುತ್ತೂರು : ಕನಸು ಕಾಣುವುದು ಮುಖ್ಯವಲ್ಲ. ಕನಸು ಕಂಡ ಮಾತ್ರಕ್ಕೆ ಅಂದುಕೊAಡ ಕಾರ್ಯ ಸಿದ್ಧಿಯಾಗುವುದಿಲ್ಲ. ಕಷ್ಟ ಪಟ್ಟು ಶ್ರಮಿಸಿದರೆ ಮಾತ್ರ ಉತ್ತಮ ಫಲ ದೊರಕಲು ಸಾಧ್ಯ. ಕನಸುಗಳು ಮೊಳಕೆಯೊಡೆದು ಸಸಿಯಾಗಲು ನಿರಂತರ ಪ್ರಯತ್ನ ಅತ್ಯವಶ್ಯಕ. ಕನಸುಗಳನ್ನು ಕಂಡು ಅದನ್ನು ನನಸಾಗಿಸಲು ದಿಟ್ಟ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ರೈ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಕನಸುಗಳು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಅದನ್ನು ನಿಜಗೊಳಿಸುವ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು. ಆ ದಾರಿ ಒಂದು ಹೊಸ ಮಜಲನ್ನೇ ಸೃಷ್ಟಿಸುವಂತಿರಬೇಕು. ಕನಸನ್ನು ಸಾಧಿಸುವ ಮಾರ್ಗವು ಪುಟ್ಟ ಹೆಜ್ಜೆಗಳಿಂದ ಪ್ರಾರಂಭವಾಗಬೇಕು ಹಾಗೂ ಅವು ನೆಮ್ಮದಿಯನ್ನು ಕೊಡುವಂತಿರಬೇಕು.
ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ತಲುಪುವುದರ ಬಗ್ಗೆ ಸದಾ ಜಾಗೃತರಾಗಬೇಕು. ಅದಕ್ಕಿಂತ ಮೊದಲು ತಮ್ಮ ಗುರಿಯನ್ನು ನಿಗದಿಪಡಿಸಿಕೊಳ್ಳುವುದು ಮುಖ್ಯ ಎಂದು ನುಡಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಸುಲಭವಲ್ಲ.ಪ್ರತಿಯೊಬ್ಬ ವಿದ್ಯಾರ್ಥಿಯು ಶೈಕ್ಷಣಿಕವಾಗಿ ಪ್ರಬಲರಾಗಬೇಕು. ಆಗ ಮಾತ್ರ ಶಿಕ್ಷಣ ಸಂಸ್ಥೆಯು ಸಾರ್ಥಕತೆಯನ್ನು ಕಾಣಲು ಸಾಧ್ಯ. ಇಂದು ಈ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಒಳ್ಳೆಯ ಹೆಸರಿಂದ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಕಾರಣ ವಿದ್ಯಾರ್ಥಿಗಳಿಗೆ ಇಲ್ಲಿ ನೀಡುತ್ತಿರುವ ಸಂಸ್ಕಾರ ಮತ್ತು ಸಂಸ್ಕೃತಿ. ವಿದ್ಯಾರ್ಥಿಗಳು ಇಂದಿನ ಈ ಕಾರ್ಯಕ್ರಮದ ಫಲಾನುಭವಿಗಳಾಗುವಂತಾಗಲಿ. ಹೊಸ ಕನಸುಗಳಿಗೆ ಪ್ರೋತ್ಸಾಹವೇ ಮುನ್ನುಡಿ ಎಂಬುದನ್ನು ಅರಿತುಕೊಂಡು ಇಂದು ಇಲ್ಲಿ ದೊರಕುವ ಪಾಠವನ್ನು ಸಮಾಜಕ್ಕೆ ಉಪಯೋಗವಾಗುವಂತೆ ಹಂಚಲಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ ಗೋಪಾಲಕೃಷ್ಣ ಭಟ್, ಸದಸ್ಯರಾದ ಕೆ ಎನ್ ಸುಬ್ರಹ್ಮಣ್ಯ, ಕೃಷ್ಣ ಪ್ರಸನ್ನ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ , ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕಿ ಹರ್ಷಿತಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಕವಿತಾ ನಿರೂಪಿಸಿ ಉಪನ್ಯಾಸಕಿ ಶರ್ಮಿಳಾ ವಂದಿಸಿದರು.
ವೈವಿಧ್ಯಮಯ ಸ್ಪರ್ಧೆಗಳು: ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಎರಡು ದಿವಸದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಾಕೃತಿಕ ರಂಗೋಲಿ, ಗ್ರಾಮ ಸಂದರ್ಶನ ಮತ್ತು ವರದಿ ತಯಾರಿ, ಯುವ ಪತ್ರಕರ್ತ, ದೃಶ್ಯ- ಕಾವ್ಯ, ಯುವ ಉದ್ಯಮಿ, ಯಕ್ಷಗಾನ ಭಾಗವತಿಕೆ, ಕಲರವ- ಸಾಂಸ್ಕೃತಿಕ ವೈವಿಧ್ಯ, ಮುಖವರ್ಣಿಕೆ, ನಿಧಿ ಶೋಧ ಮತ್ತು ಕನ್ನಡ ಕವನ ರಚನೆ ಹಾಗೂ ವಾಚನ ವಿವಿಧ ಸ್ಪರ್ಧೆಗಳು ನಡೆದವು. ಸುಮಾರು 36 ಪ್ರೌಢಶಾಲೆಗಳ 660 ವಿದ್ಯಾರ್ಥಿಗಳು ಮತ್ತು 70 ಅಧ್ಯಾಪಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುತ್ತೂರು : ಕನಸು ಕಾಣುವುದು ಮುಖ್ಯವಲ್ಲ. ಕನಸು ಕಂಡ ಮಾತ್ರಕ್ಕೆ ಅಂದುಕೊAಡ ಕಾರ್ಯ ಸಿದ್ಧಿಯಾಗುವುದಿಲ್ಲ. ಕಷ್ಟ ಪಟ್ಟು ಶ್ರಮಿಸಿದರೆ ಮಾತ್ರ ಉತ್ತಮ ಫಲ ದೊರಕಲು ಸಾಧ್ಯ. ಕನಸುಗಳು ಮೊಳಕೆಯೊಡೆದು ಸಸಿಯಾಗಲು ನಿರಂತರ ಪ್ರಯತ್ನ ಅತ್ಯವಶ್ಯಕ. ಕನಸುಗಳನ್ನು ಕಂಡು ಅದನ್ನು ನನಸಾಗಿಸಲು ದಿಟ್ಟ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ರೈ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಕನಸುಗಳು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಅದನ್ನು ನಿಜಗೊಳಿಸುವ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು. ಆ ದಾರಿ ಒಂದು ಹೊಸ ಮಜಲನ್ನೇ ಸೃಷ್ಟಿಸುವಂತಿರಬೇಕು. ಕನಸನ್ನು ಸಾಧಿಸುವ ಮಾರ್ಗವು ಪುಟ್ಟ ಹೆಜ್ಜೆಗಳಿಂದ ಪ್ರಾರಂಭವಾಗಬೇಕು ಹಾಗೂ ಅವು ನೆಮ್ಮದಿಯನ್ನು ಕೊಡುವಂತಿರಬೇಕು.