Wednesday, January 22, 2025
ಸುದ್ದಿ

ಗೊಡೆಕ್ಸ ಕಂಪೆನಿ ವತಿಯಿಂದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ (ರಿ).ದ.ಕ.ಉಡುಪಿ, ಕುಂದಾಪುರ-ಬೈಂದೂರು ವಲಯದ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಕಾರ್ಯಕ್ರಮ – – ಕಹಳೆ ನ್ಯೂಸ್

ಗೊಡೆಕ್ಸ ಕಂಪೆನಿ ವತಿಯಿಂದ ನಮ್ಮ ಸಂಸ್ಥೆಯ ಸದಸ್ಯರಿಗೆ ಒಂದು ದಿನದ “ಬೆಳಕು ಸಂಯೋಜನೆ” ( LIGHTINGS) ಮತ್ತು “ವಿವಾಹ ಛಾಯಾಗ್ರಾಹಣ” ತರಬೇತಿ ಕಾರ್ಯಕ್ರಮ ನ.12ರಂದು ಕ್ರೌನ್ ಹಾಲ್ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ತೆಕಟ್ಟೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಹವ್ಯಾಸಿ ವನ್ಯ ಜೀವಿ ಛಾಯಾಗ್ರಾಹಕರು ಹಾಗೂ ಯುವ ಮೆರಿಡಿಯನ್ ಸಂಸ್ಥೆಯ ಪಾಲುದಾರರಾದ ಶ್ರೀಯುತ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ,ದಿನದಿಂದ ದಿನಕ್ಕೆ ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನದಲ್ಲಿ ಉತ್ತಮ ಗುಣಮಟ್ಟದ ಛಾಯಾಚಿತ್ರವನ್ನು ಗ್ರಾಹಕರಿಗೆ ನೀಡುವಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳ ಅಗತ್ಯತೆವಿದ್ದು ಇಂತಹ ತರಬೇತಿ ಕಾರ್ಯಕ್ರಮ ನಡೆಸಿದ ಸಂಸ್ಥೆಯ ಕಾರ್ಯ ವ್ಯೆಖರಿ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಘದ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ ವಹಿಸಿದರು. ಇದೇ ಸಂದರ್ಭದಲ್ಲಿ ನಮ್ಮ ಸಂಘದ ಜಾಗ ಖರೀದಿ ಬಗ್ಗೆ ಹಮ್ಮಿಕೊಂಡ ಯಕ್ಷಗಾನ ಕಾರ್ಯಕ್ರಮದ ಟಿಕೆಟ್ ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯುವ ಮೆರಿಡಿಯನ್ ಪಾಲುದಾರ ವಿನಯ ಕುಮಾರ್ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಜಮದಗ್ನಿ, ಸಲಹಾ ಸಮಿತಿಯ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ,ಗೋಡೆಕ್ಸ ಕಂಪನಿಯ ಮೆನೆಜರ್ ವಿಶ್ವನಾಥ ಅರ್ನಾಕಲ್ ಛಾಯಾ ಕಾರ್ಯದರ್ಶಿ ಪ್ರಮೋದ್ ಚಂದನ್, ಉಪಸ್ಥಿತರಿದ್ದರು.

ಆಸಿಮ್ ಕೋಮಾಚಿ ತರಬೇತಿ ನಡೆಸಿಕೊಟ್ಟರು. ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 85 ಜನ ಸದಸ್ಯರು ಭಾಗವಹಿಸಿದರು. ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು