ವೀರಕಂಬ ಗ್ರಾಮದ ಕೋಡಪದವು ವೀರಕಂಬ ಕೂಡ ರಸ್ತೆಯ ಮಜ್ಜೋನಿ ಎಂಬಲ್ಲಿ “ಸ್ನೇಹ ಸಂಗಮ” ರಿಕ್ಷಾ ಪಾರ್ಕ್ ಇದರ ಉದ್ಘಾಟನೆ – ಕಹಳೆ ನ್ಯೂಸ್
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನೇಶ್ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಪೂಜಾರಿ, ವಿಟ್ಲ ಪಡ್ನೂರ್ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿಕ್ನಾಜೆ, ಮಾಜಿ ಪಂಚಾಯತ್ ಸದಸ್ಯರಾದ ಸಿದ್ದಿಕ್ ಸರವು, ಸಿರಾಜ್ ಮದಕ , ಸ್ನೇಹಸಂಗಮ ರಿಕ್ಷಾ ಪಾರ್ಕ್ ಮಜ್ಜೋನಿ ಇದರ ಅಧ್ಯಕ್ಷರಾದ ಉಮೇಶ್ ಪೂಜಾರಿ ಪಡೀಲು, ಉಪಾಧ್ಯಕ್ಷರಾದ ಅಬ್ದುಲ್ ಶರೀಫ್, ಕಾರ್ಯದರ್ಶಿಯಾದ ಇಲ್ಯಾಸ್ ಪಿ, ಹಾಗೂ ರಿಕ್ಷಾ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು.