Recent Posts

Monday, January 20, 2025
ಸುದ್ದಿ

ಅಕ್ರಮ ಜೂಜಾಟ..ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ; ಐವರು ವಶಕ್ಕೆ, ಒಬ್ಬ ಪರಾರಿ..! – ಕಹಳೆ ನ್ಯೂಸ್

ಸುಳ್ಯ ತಾಲೂಕು ಮುರುಳ್ಳಿ ಗ್ರಾಮದ ಸಮಹಾದಿ ಸರ್ಕಾರಿ ಗುಡ್ಡ ಜಮೀನಿನಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಜೂಜಾಟ ಆಡ್ತಾ ಇದ್ರು. ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಸಮವಸ್ತçದಲ್ಲಿ ಕಂಡು ಜೂಜಾಟ ಆಡ್ತಾ ಇದ್ದವರು ತಕ್ಷಣ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅದರಲ್ಲಿ ೫ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ೪೪ವರ್ಷದ ರಾಮಣ್ಣ ಕುಲಾಲ್, ಪಿಎಮ್ ಮೊಹಮ್ಮದ್, ಆನಂದ್, ವಿನಯಚಂದ್ರ, ಕೇಶವ ಜೂಜಾಟ ಆಡ್ತಾ ಇದ್ದವರು. ಆದ್ರೆ ಒಬ್ಬ ವ್ಯಕ್ತಿ ಮಾತ್ರ ಓಡಿ ಪರಾರಿಯಾಗಿದ್ದಾನೆ. ಆರೋಪಿಗಳು ಕೃತ್ಯಕ್ಕೆ ಬಳಸಿದಿ ವಿವಿಧ ಮುಖಬೆಲೆಯ ೧೫೦೦ರೂ ಮತ್ತು ವಿವಿಧ ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಪ್ಲಾಸ್ಟಿಕ್ ಟರ್ಪಾಲ್‌ನ್ನು ಪೊಲೀಸ್ರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು