Monday, January 20, 2025
ಸುದ್ದಿ

ನೆಟ್ಟಾರು: ಬೈಕ್ ಅಪಘಾತದಲ್ಲಿ ಮೃತಪಟ್ಟ ರೋಹಿತ್ ಬೊಳಿಯಮೂಲೆ ನೆಟ್ಟಾರು ಇವರ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ನೆಟ್ಟಾರು: ಅಕ್ಷಯ ಯುವಕ ಮಂಡಲ ರಿ ನೆಟ್ಟಾರು ಇದರ ವತಿಯಿಂದ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದ ದಿ. ರೋಹಿತ್ ಬೊಳಿಯಮೂಲೆ ನೆಟ್ಟಾರು ಇವರ ಶ್ರದ್ಧಾಂಜಲಿ ಸಭೆಯು ನ.13ರಂದು ನೆಟ್ಟಾರು ಶಾಲಾ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕ ಮಂಡಲದ ಗೌರವಾಧ್ಯಕ್ಷರಾದ ವೆಂಕಟರಮಣ ಗೌಡ ದೀಪ ಬೆಳಗಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸದಸ್ಯ ವಸಂತ ನೆಟ್ಟಾರು, ಮೂರು ತಿಂಗಳ ಹಿಂದೆ ನಮ್ಮೂರಿನ ಯುವ ಮುಂದಾಳು,ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದರು.ಆ ಕರಿಛಾಯೆ ಮಾಸುವ ಮುನ್ನವೇ ಇನ್ನೋರ್ವ ಸದಸ್ಯ ,ಶ್ರಮಜೀವಿ ರೋಹಿತ್ ನ.05ರಂದು ಬೈಕ್ ಅಪಘಾತಕ್ಕೆ ಬಲಿಯಾಗಿರುವುದು ಯುವಕ ಮಂಡಲಕ್ಕೆ ಹಾಗೂ ಮನೆಯವರಿಗೆ ತೀವ್ರ ನೋವುಂಟು ಮಾಡಿದೆ ಎಂದರು.

ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ ಮಾತನಾಡಿ ಬಾಲ್ಯದಿಂದಲೇ ನಾವು ಒಟ್ಟಿಗೆ ಶಾಲೆ ಕಾಲೇಜಿಗೆ ಹೋಗುತ್ತಿದ್ದೆವು.ಆ ನಂತರ ಉದ್ಯೋಗ ಬೇರೆ ಬೇರೆಯಾದರೂ ಗೆಳೆತನ ಮುಂದುವರಿದಿತ್ತು. ತಕ್ಷಣ ಸಹಾಯಕ್ಕೆ ಮಿಡಿಯುತ್ತಿದ್ದ ಸಹೃದಯಿ ಗೆಳೆಯ ಇಂದು ಜೊತೆಗಿಲ್ಲವಲ್ಲ ಅನ್ನುವ ನೋವು ಪದೇ ಪದೇ ಕಾಡುತ್ತಿದೆ ಎಂದರು.

ಸದಸ್ಯ ಶೈಲೇಶ್ ನೆಟ್ಟಾರು ಮಾತನಾಡಿ ಯಾರೊಂದಿಗೂ ಹೆಚ್ಚು ಮಾತನಾಡದೆ ತನ್ನ ಉದ್ಯೋಗದಲ್ಲಿ ತೊಡಗಿಕೊಂಡಿದ್ದವನು ರೋಹಿತ್. ಎಲ್ಲರೊಂದಿಗೆ ಬೆರೆಯುವ ಸ್ನೇಹಮಯಿ ವ್ಯಕ್ತಿತ್ವ,ಯುವಕ ಮಂಡಲದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಗೆಳೆಯನ ಅಗಲಿಕೆ ಒಂದು ದುರಂತ. ಮನೆಗೊಬ್ಬ ಇದ್ದ ಮಗನನ್ನು ಕಳೆದುಕೊಂಡ ಅವನ ಕುಟುಂಬ ದುಃಖಿತರಾಗಿದ್ದಾರೆ ಎಂದರು.

ನಂತರ ಅಗಲಿದ ರೋಹಿತ್ ಅವರ ಆತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಹಾಗೂ ಮಹಿಳಾ ಮಂಡಲದ ಸದಸ್ಯರು ಮತ್ತು ಊರವರು ಪಾಲ್ಗೊಂಡಿದ್ದರು.